Select Your Language

Notifications

webdunia
webdunia
webdunia
webdunia

ಅರ್ಜೆಂಟಾಗಿ ತೆಂಡುಲ್ಕರ್ ಸಂಪರ್ಕಿಸಲು ವಿರಾಟ್ ಕೊಹ್ಲಿಗೆ ಸಲಹೆ

ಅರ್ಜೆಂಟಾಗಿ ತೆಂಡುಲ್ಕರ್ ಸಂಪರ್ಕಿಸಲು ವಿರಾಟ್ ಕೊಹ್ಲಿಗೆ ಸಲಹೆ
ಲೀಡ್ಸ್ , ಗುರುವಾರ, 26 ಆಗಸ್ಟ್ 2021 (09:25 IST)
ಲೀಡ್ಸ್: ಸತತ ಬ್ಯಾಟಿಂಗ್ ವೈಫಲ್ಯಕ್ಕೊಳಗಾಗಿರುವ ರನ್ ಮೆಷಿನ್‍ ವಿರಾಟ್ ಕೊಹ್ಲಿಗೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ರನ್ನು ಸಂಪರ್ಕಿಸಿ ಸಲಹೆ ಪಡೆಯಲು ಸುನಿಲ್ ಗವಾಸ್ಕರ್ ಸೂಚಿಸಿದ್ದಾರೆ.


ಕೊಹ್ಲಿ ಆಧುನಿಕ ಕ್ರಿಕೆಟ್ ನ ದಿಗ್ಗಜ ಬ್ಯಾಟ್ಸ್ ಮನ್. ಆದರೆ ಕಳೆದ ಎರಡು ವರ್ಷದಿಂದ ಅವರ ಬ್ಯಾಟಿಂಗ್ ಕಳೆಗುಂದಿದೆ. ಹೀಗಾಗಿ ತಕ್ಷಣವೇ ಅವರು ತಮ್ಮ ಬ್ಯಾಟಿಂಗ್ ಸರಿಪಡಿಸಿಕೊಳ್ಳಬೇಕಿದೆ. ಇದನ್ನು ಸರಿಪಡಿಸುವುದು ಹೇಗೆ ಎಂದು ತಿಳಿಯಲು ಕೊಹ್ಲಿ ತಕ್ಷಣವೇ ಸಚಿನ್ ಗೆ ಕರೆ ಮಾಡಿ ಸಲಹೆ ಪಡೆಯಬೇಕು ಎಂದು ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.

ಸಚಿನ್ 2003-04 ರಲ್ಲಿ ಸಚಿನ್ ಸಿಡ್ನಿ ಟೆಸ್ಟ್ ನಲ್ಲಿ ಇದೇ ಸ್ಥಿತಿಯಲ್ಲಿದ್ದರು. ಆದರೆ ಆಗ ಅವರು ನಾನು ಬಿಲ್ ಕುಲ್ ಕವರ್ ಡ್ರೈವ್ ಹೊಡೆಯಲ್ಲ ತಮ್ಮಷ್ಟಕ್ಕೆ ತಾವೇ ಹೇಳಿಕೊಂಡು ಆಡಿದ್ದರು. ಆಗ ಅವರು ಆಫ್ ಸ್ಟಂಪ್ ನಾಚೆ ಹೋಗುತ್ತಿದ್ದ ಬಾಲ್ ಹೊಡೆಯಲು ಹೋಗಿ ಔಟಾಗುತ್ತಿದ್ದರು. ಆದರೆ ತಮಗೆ ತಾವೇ ನಿಯಂತ್ರಣ ಹಾಕಿಕೊಂಡು ಯಶಸ್ಸು ಸಾಧಿಸಿದರು. ಈಗ ಕೊಹ್ಲಿಯೂ ಅದೇ ಸ್ಥಿತಿಯಲ್ಲಿದ್ದಾರೆ’ ಎಂದು ಗವಾಸ್ಕರ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್ ಕೊಹ್ಲಿ ನಿರ್ಧಾರ ಸಮರ್ಥಿಸಿದ ರಿಷಬ್ ಪಂತ್