Publish Date: Fri, 10 Sep 2021 (16:48 IST)
Updated Date: Fri, 10 Sep 2021 (16:49 IST)
ಲಂಡನ್: ಕೊರೋನಾ ಕಾರಣದಿಂದ ಅಂತಿಮ ಟೆಸ್ಟ್ ಪಂದ್ಯದಿಂದ ಹಿಂದೆ ಸರಿದ ಟೀಂ ಇಂಡಿಯಾಗೆ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ಸಲಹೆಯೊಂದನ್ನು ನೀಡಿದ್ದಾರೆ.
ಬಿಸಿಸಿಐ ಈಗ ನಷ್ಟವಾದ ಅಂತಿಮ ಟೆಸ್ಟ್ ಪಂದ್ಯವನ್ನು ಇನ್ನೊಂದು ದಿನ ಆಯೋಜಿಸುವ ಆಹ್ವಾನ ನೀಡಿದೆ. ಇದನ್ನು ಬಿಸಿಸಿಐ ಮರೆಯಬಾರದು. ಯಾಕೆಂದರೆ ಇಂಗ್ಲೆಂಡ್ 2008 ರಲ್ಲಿ ಭಾರತಕ್ಕೆ ಮಾಡಿದ ಉಪಕಾರವನ್ನು ನಾವು ಮರೆಯಬಾರದು ಎಂದಿದ್ದಾರೆ.
2008 ರಲ್ಲಿ ಮುಂಬೈ ಮೇಲೆ ಉಗ್ರರ ದಾಳಿಯಾದಾಗ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಧೈರ್ಯ ಮಾಡಿ ಸರಣಿಯಲ್ಲಿ ಉಳಿದಿದ್ದ ಎರಡು ಟೆಸ್ಟ್ ಪಂದ್ಯವಾಡಲು ಮತ್ತೆ ಭಾರತಕ್ಕೆ ಕಳುಹಿಸಿತ್ತು. ಅಂದು ಇಸಿಬಿ ಭಾರತಕ್ಕೆ ಕೊಟ್ಟ ಮಾತು ಉಳಿಸಿಕೊಂಡಿತ್ತು. ಇದೀಗ ಭಾರತವೂ ತನ್ನ ಮಾತನ್ನು ಉಳಿಸಿಕೊಳ್ಳಬೇಕಿದೆ ಎಂದು ಗವಾಸ್ಕರ್ ಹೇಳಿದ್ದಾರೆ.