Publish Date: Fri, 10 Sep 2021 (16:11 IST)
Updated Date: Fri, 10 Sep 2021 (16:13 IST)
ಮ್ಯಾಂಚೆಸ್ಟರ್: ಭಾರತ ಮತ್ತು ಇಂಗ್ಲೆಂಡ್ ನಡುವೆ ಇಂದು ನಡೆಯಬೇಕಿದ್ದ ಅಂತಿಮ ಟೆಸ್ಟ್ ಪಂದ್ಯ ರದ್ದಾಗಿದೆ.
ಟೀಂ ಇಂಡಿಯಾ ಪಾಳಯದಲ್ಲಿ ಕೊರೋನಾ ಪ್ರಕರಣಗಳು ಕಂಡುಬಂದ ಹಿನ್ನಲೆಯಲ್ಲಿ ಪಂದ್ಯದಿಂದ ಹಿಂದೆ ಸರಿಯಲು ಭಾರತೀಯ ಕ್ರಿಕೆಟಿಗರು ನಿರ್ಧರಿಸಿದ್ದರು. ಇದರಿಂದಾಗಿ ಪಂದ್ಯ ರದ್ದುಗೊಂಡಿತು.
ಕೋಚ್ ರವಿಶಾಸ್ತ್ರಿ, ಭರತ್ ಅರುಣ್, ಶ್ರೀಧರ್ ಬಳಿಕ ನಿನ್ನೆ ಫಿಸಿಯೋ ಯೋಗೇಶ್ ಪರ್ಮಾರ್ ಗೂ ಕೊರೋನಾ ಸೋಂಕು ದೃಢಪಟ್ಟಿತ್ತು. ಆದರೆ ಕ್ರಿಕೆಟಿಗರಿಗೆ ನೆಗೆಟಿವ್ ವರದಿ ಬಂದಿತ್ತು. ಹಾಗಿದ್ದರೂ ಕ್ರಿಕೆಟಿಗರು ಪಂದ್ಯವಾಡಲು ಹಿಂದೇಟು ಹಾಕಿದ್ದಾರೆ.
ಇದೀಗ ಬಿಸಿಸಿಐ ಅಭಿಮಾನಿಗಳಿಗೆ ಪಂದ್ಯ ರದ್ದಾಗಿದ್ದಕ್ಕೆ ಕ್ಷಮೆ ಕೇಳಿದ್ದು, ಮುಂದೊಂದು ದಿನ ಬಾಕಿ ಉಳಿದ ಈ ಟೆಸ್ಟ್ ಪಂದ್ಯವಾಡಲು ಇಂಗ್ಲೆಂಡ್ ಕ್ರಿಕೆಟ್ ಮಂಡಳಿಗೆ ಆಫರ್ ನೀಡಿದೆ.