Publish Date: Fri, 10 Sep 2021 (09:57 IST)
Updated Date: Fri, 10 Sep 2021 (09:58 IST)
ಕಾಬೂಲ್: ಟಿ20 ವಿಶ್ವಕಪ್ ಗೆ ತಂಡ ಪ್ರಕಟಿಸಿದ ಬೆನ್ನಲ್ಲೇ ಅಸಮಾಧಾನಗೊಂಡ ಅಫ್ಘಾನಿಸ್ತಾನ ಕ್ರಿಕೆಟ್ ತಂಡಕ್ಕೆ ರಶೀದ್ ಖಾನ್ ರಾಜೀನಾಮೆ ನೀಡಿದ್ದಾರೆ.
ತಾಲಿಬಾನ್ ಆಡಳಿತ ಬಂದ ಮೇಲೆ ಅಫ್ಘಾನಿಸ್ತಾನದಲ್ಲಿ ಪುರುಷರ ಕ್ರಿಕೆಟ್ ಗೆ ಅನುಮತಿ ನೀಡಿದೆ. ಆದರೆ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ 18 ಆಟಗಾರರ ತಂಡ ಪ್ರಕಟಿಸಿದೆ. ರಶೀದ್ ಖಾನ್ ರನ್ನು ನಾಯಕರಾಗಿ ಆಯ್ಕೆ ಮಾಡಿದೆ.
ಆದರೆ ನಾಯಕರಾಗಿ ಆಯ್ಕೆ ಮಾಡಿದ ಬೆನ್ನಲ್ಲೇ ರಶೀದ್ ಖಾನ್ ರಾಜೀನಾಮೆ ನೀಡಿದ್ದಾರೆ. ತಂಡ ಪಕ್ರಟಿಸುವ ಮೊದಲು ಕ್ರಿಕೆಟ್ ಮಂಡಳಿ ತಮ್ಮ ಸಲಹೆಯನ್ನೇ ಕೇಳಲಿಲ್ಲ ಎನ್ನುವುದು ಅವರ ಅಸಮಾಧಾನಕ್ಕೆ ಕಾರಣವಾಗಿದೆ. ಹೀಗಾಗಿ ರಾಜೀನಾಮೆ ನೀಡುತ್ತಿರುವುದಾಗಿ ಟ್ವೀಟ್ ಮಾಡಿದ್ದಾರೆ.