ಲಂಡನ್: ಮ್ಯಾಂಚೆಸ್ಟರ್ ನಲ್ಲಿ ನಡೆಯಬೇಕಿದ್ದ ಭಾರತ-ಇಂಗ್ಲೆಂಡ್ ನಡುವಿನ ಅಂತಿಮ ಟೆಸ್ಟ್ ಪಂದ್ಯ ರದ್ದುಗೊಂಡಿದೆ. ಆದರೆ ಇದರಿಂದ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಗೆ ಭಾರೀ ನಷ್ಟವಾಗಿದೆ.
ಈ ಒಂದು ಪಂದ್ಯ ಕೊನೆಯ ಕ್ಷಣದಲ್ಲಿ ರದ್ದಾಗಿದ್ದರಿಂದ ಇಂಗ್ಲೆಂಡ್ ಮಂಡಳಿ ಬರೋಬ್ಬರಿ 200 ಕೋಟಿ ರೂ.ಗಳಷ್ಟು ನಷ್ಟ ಅನುಭವಿಸಿದೆ ಎನ್ನಲಾಗಿದೆ.
ಹೀಗಾಗಿಯೇ ಬಿಸಿಸಿಐ ಈ ನಷ್ಟ ಭರಿಸಲು ಮತ್ತೊಮ್ಮೆ ಈಪಂದ್ಯವನ್ನು ಇನ್ನೊಂದು ದಿನ ಆಯೋಜಿಸುವ ಪ್ರಸ್ತಾಪವನ್ನು ಇಸಿಬಿ ಮುಂದಿಟ್ಟಿದೆ. ಆದರೆ ಇದು ಯಾವಾಗ ಎಂಬುದು ಇನ್ನಷ್ಟೇ ನಿರ್ಧಾರವಾಗಬೇಕಿದೆ.