Select Your Language

Notifications

webdunia
webdunia
webdunia
webdunia

ಭಾರತ-ಪಾಕ್ ಮ್ಯಾಚ್ ಗೆ ಟಿಕೆಟ್ ಕೊಡಿಸಿ: ರೋಹಿತ್ ಶರ್ಮಾಗೆ ಬೇಡಿಕೆ!

ಭಾರತ-ಪಾಕ್ ಮ್ಯಾಚ್ ಗೆ ಟಿಕೆಟ್ ಕೊಡಿಸಿ: ರೋಹಿತ್ ಶರ್ಮಾಗೆ ಬೇಡಿಕೆ!
ದುಬೈ , ಸೋಮವಾರ, 11 ಅಕ್ಟೋಬರ್ 2021 (09:51 IST)
ದುಬೈ: ಐಪಿಎಲ್ 14 ಮುಗಿದ ತಕ್ಷಣ ಟಿ20 ವಿಶ್ವಕಪ್ ಕೂಟ ಯುಎಇ ಅಂಗಣದಲ್ಲಿ ನಡೆಯಲಿದೆ. ಅದರಲ್ಲೂ ಭಾರತ ಮೊದಲ ಪಂದ್ಯದಲ್ಲೇ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಪಂದ್ಯವಾಡಲಿದೆ.


ಈ ಪಂದ್ಯ ಅಕ್ಟೋಬರ್ 24 ರಂದು ನಡೆಯಲಿದೆ. ಐಸಿಸಿ ಟೂರ್ನಿಗಳಲ್ಲಿ ಮಾತ್ರ ಈ ಎರಡು ತಂಡಗಳು ಮುಖಾಮುಖಿಯಾಗುತ್ತವೆ. ಅದರಲ್ಲೂ ಭಾರತ-ಪಾಕ್ ಪಂದ್ಯವೆಂದರೆ ಫೈನಲ್ ಗಿಂತ ಹೆಚ್ಚು ಆವೇಶವಿರುತ್ತದೆ.

ಇದೀಗ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯದ ವೇಳೆ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ ಅಭಿಮಾನಿಯೊಬ್ಬರು ನಮಗೆ ಭಾರತ-ಪಾಕ್ ಪಂದ್ಯಕ್ಕೆ ಎರಡು ಟಿಕೆಟ್ ಕೊಡಿಸಿ ಎಂದು ರೋಹಿತ್ ಶರ್ಮಾಗೆ ಮನವಿ ಮಾಡುತ್ತಿರುವ ಫಲಕ ಹಿಡಿದು ಎಲ್ಲರ ಗಮನ ಸೆಳೆದಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಶ್ವಕಪ್ ಪಂದ್ಯಗಳಿಗೆ ಶೇ.70 ಪ್ರೇಕ್ಷಕರಿಗೆ ಮಾತ್ರ ಮೈದಾನಕ್ಕೆ ಪ್ರವೇಶಿಸಲು ಅವಕಾಶ ನೀಡಲಾಗಿದೆ. ಹೀಗಾಗಿ ಟಿಕೆಟ್ ಗಾಗಿ ಅಭಿಮಾನಿಗಳಿಗೆ ಟಿಕೆಟ್ ಸಿಗುವುದು ಅಷ್ಟು ಸುಲಭವಲ್ಲ. ಇದಕ್ಕಾಗಿ ನೇರವಾಗಿ ರೋಹಿತ್ ಶರ್ಮಾಗೇ ಬೇಡಿಕೆಯಿಟ್ಟಿದ್ದಾರೆ!

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 14: ಸಿಎಸ್ ಕೆ ಫೈನಲ್ಸ್ ದಾಖಲೆ, ಡೆಲ್ಲಿಗೆ ಮತ್ತೊಂದು ಚಾನ್ಸ್