Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿ ಹೇಳಿದ ಸೀಕ್ರೆಟ್ ಬಯಲು ಮಾಡಿದ ಇಶಾನ್ ಕಿಶನ್

ವಿರಾಟ್ ಕೊಹ್ಲಿ ಹೇಳಿದ ಸೀಕ್ರೆಟ್ ಬಯಲು ಮಾಡಿದ ಇಶಾನ್ ಕಿಶನ್
ದುಬೈ , ಭಾನುವಾರ, 10 ಅಕ್ಟೋಬರ್ 2021 (09:42 IST)
ದುಬೈ: ಐಪಿಎಲ್ 14 ರಲ್ಲಿ ಕಳಪೆ ರನ್ ಸಾಧನೆ ಮಾಡಿ ಮಂಕಾಗಿ ಕೂತಿದ್ದ ಮುಂಬೈ ಇಂಡಿಯನ್ ಬ್ಯಾಟ್ಸ್ ಮನ್ ಇಶಾನ್ ಕಿಶನ್ ಬಳಿ ಬಂದ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ಸಮಾಧಾನ ಮಾಡಿದ ದೃಶ್ಯಗಳು ಕೆಲವು ದಿನಗಳ ಹಿಂದೆ ವೈರಲ್ ಆಗಿತ್ತು. ಆ ದಿನ ಕೊಹ್ಲಿ ಹೇಳಿದ ಮಾತೇನೆಂದು ಇಶಾನ್ ಬಹಿರಂಗಪಡಿಸಿದ್ದಾರೆ.

Photo Courtesy: Google

ಅಂತಿಮ ಲೀಗ್ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ ಬಳಿಕ ಇಶಾನ್, ಕೊಹ್ಲಿ ಅಂದು ಹೇಳಿದ ಮಾತೇನೆಂದು ಬಹಿರಂಗಪಡಿಸಿದ್ದಾರೆ.

‘ನನಗೆ ಓಪನರ್ ಆಗಲು ಇಷ್ಟ. ಅವತ್ತು ವಿರಾಟ್ ಭಾಯ್ ಕೂಡಾ ಅದನ್ನೇ ಹೇಳಿದರು. ದೊಡ್ಡ ವೇದಿಕೆಯಲ್ಲಿ ಓಪನಿಂಗ್ ಮಾಡಲು ರೆಡಿಯಾಗು ಎಂದಿದ್ದರು’ ಎಂದು ಇಶಾನ್ ಬಹಿರಂಗಪಡಿಸಿದ್ದಾರೆ. ಈಗ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿರುವ ಇಶಾನ್ ತಂಡದಲ್ಲಿ ಓಪನರ್ ಆಗಿ ಕಣಕ್ಕಿಳಿಯಬಹುದೇ ಎಂಬ ಕುತೂಹಲವಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪಂಜಾಬ್ ಪರ ಕೆಎಲ್ ರಾಹುಲ್ ಗೆ ಇದೇ ಕೊನೇ ಐಪಿಎಲ್? ಅನುಮಾನ ಹುಟ್ಟುಹಾಕಿದ ಪೋಸ್ಟ್