Select Your Language

Notifications

webdunia
webdunia
webdunia
webdunia

ಸ್ನೇಹಿತನ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ ನಟಿ ಸಂಜನಾ ಗಲ್ರಾನಿ

ಸ್ನೇಹಿತನ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ ನಟಿ ಸಂಜನಾ ಗಲ್ರಾನಿ
ಬೆಂಗಳೂರು , ಬುಧವಾರ, 27 ಅಕ್ಟೋಬರ್ 2021 (10:19 IST)
ಬೆಂಗಳೂರು: ಸ್ನೇಹಿತ ರಾಹುಲ್ ಥೋನ್ಸೆ ನಂಬಿಸಿ ಹಣಕಾಸಿನ ವಂಚನೆ ಮಾಡಿದ್ದಾನೆ ಎಂದು ನಟಿ ಸಂಜನಾ ಗಲ್ರಾನಿ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ.

ಇಂದಿರಾ ನಗರ ಠಾಣೆಗೆ ಬಂದ ನಟಿ ಸಂಜನಾ ರಾಹುಲ್ ವಿರುದ್ಧ ದಾಖಲೆಗಳ ಸಮೇತ ದೂರು ನೀಡಿದ್ದಾರೆ. ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಸಂಜನಾ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.

ಹೂಡಿಕೆ ಹೆಸರಿನಲ್ಲಿ ಹಣ ಪಡೆದು ವಂಚನೆ ಮಾಡಿದ್ದು, ಇದರಲ್ಲಿ ರಾಹುಲ್ ಜೊತೆಗೆ ಆತನ ಪೋಷಕರೂ ಶಾಮೀಲಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಇದೀಗ ಪೊಲೀಸರು ರಾಹುಲ್ ರನ್ನು ಕರೆಸಿ ವಿಚಾರಣೆ ನಡೆಸಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಓವರ್ ಆಕ್ಟಿಂಗ್ ಎಲ್ಲಾ ಬೇಡ! ಗರಂ ಆದ ಶಿವರಾಜ್ ಕುಮಾರ್