Publish Date: Wed, 27 Oct 2021 (09:45 IST)
Updated Date: Wed, 27 Oct 2021 (09:56 IST)
ಬೆಂಗಳೂರು: ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಮದಗಜ ಸಿನಿಮಾ ಕಡೆಯಿಂದ ಅಭಿಮಾನಿಗಳಿಗೆ ಖುಷಿ ಸುದ್ದಿ ಸಿಕ್ಕಿದೆ.
ಲಾಕ್ ಡೌನ್ ಮುಗಿದು ಚಿತ್ರರಂಗ ಸಂಪೂರ್ಣ ತೆರೆದ ಮೇಲೂ ಮದಗಜ ಚಿತ್ರ ರಿಲೀಸ್ ಬಗ್ಗೆ ಇನ್ನೂ ಅಪ್ ಡೇಟ್ ಸಿಕ್ಕಿಲ್ಲ ಎನ್ನುತ್ತಿದ್ದ ಅಭಿಮಾನಿಗಳಿಗೆ ಶ್ರೀಮುರಳಿ ಆಂಡ್ ಟೀಂ ಸಿಹಿ ಸುದ್ದಿ ಕೊಟ್ಟಿದೆ.
ಡಿಸೆಂಬರ್ ನಲ್ಲಿ ಚಿತ್ರ ತೆರೆ ಕಾಣುತ್ತಿರುವುದಾಗಿ ಚಿತ್ರತಂಡ ಹೇಳಿದೆ. ಈ ಸಿನಿಮಾ ತೆಲುಗಿನಲ್ಲೂ ಬಿಡುಗಡೆಯಾಗುತ್ತಿದೆ. ಪಕ್ಕಾ ಆಕ್ಷನ್, ಥ್ರಿಲ್ಲರ್ ಕಥಾಹಂದರವಿರುವ ಸಿನಿಮಾದಲ್ಲಿ ಶ್ರೀಮುರಳಿಗೆ ನಾಯಕಿಯಾಗಿ ಆಶಿಕಾ ರಂಗನಾಥ್ ಅಭಿನಯಿಸಿದ್ದಾರೆ. ಜೊತೆಗೆ ತೆಲುಗಿನ ಜಗಪತಿ ಬಾಬು ಪ್ರಮುಖ ಪಾತ್ರ ಮಾಡಿದ್ದಾರೆ. ಉಮಾಪತಿ ಶ್ರೀನಿವಾಸ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.