Select Your Language

Notifications

webdunia
webdunia
webdunia
webdunia

ಆರ್ಯನ್ ಖಾನ್ ಜೊತೆ ಸೆಲ್ಫೀ ಕ್ಲಿಕ್ಕಿಸಿದ್ದ ಕಿರಣ್ ಗೋಸಾವಿ ಅರೆಸ್ಟ್

ಆರ್ಯನ್ ಖಾನ್ ಜೊತೆ ಸೆಲ್ಫೀ ಕ್ಲಿಕ್ಕಿಸಿದ್ದ ಕಿರಣ್ ಗೋಸಾವಿ ಅರೆಸ್ಟ್
ಮುಂಬೈ , ಗುರುವಾರ, 28 ಅಕ್ಟೋಬರ್ 2021 (10:32 IST)
ಮುಂಬೈ: ಡ್ರಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ಯನ್ ಖಾನ್ ಅರೆಸ್ಟ್ ಆದಾಗ ಆತನ ಜೊತೆ ಸೆಲ್ಫೀ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದ ಕಿರಣ್ ಗೋಸಾವಿಯನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ.

ಆರ್ಯನ್ ಜೊತೆ ಸೆಲ್ಫೀ ಕ್ಲಿಕ್ಕಿಸಿದ್ದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಅಲ್ಲದೆ, ಎನ್ ಸಿಬಿಗೆ ಸಂಬಂಧವೇ ಪಡದ ಕಿರಣ್ ಗೋಸಾವಿ ಈ ಪ್ರಕರಣದಲ್ಲಿ ಟೀಂ ಜೊತೆ ಇದ್ದಿದ್ದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿತ್ತು.

ತಮ್ಮ ಮೇಲೆ ಅನುಮಾನ ಮೂಡುತ್ತಿದ್ದಂತೇ ಕಿರಣ್ ಗೋಸಾವಿ ತಲೆಮರೆಸಿಕೊಂಡಿದ್ದರು. ಆದರೆ ಇದೀಗ ಪುಣೆ ಪೊಲೀಸರು ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗೋಸಾವಿ ಖಾಸಗಿ ಡಿಟೆಕ್ಟಿವ್ ಆಗಿದ್ದು, ಇದಕ್ಕೂ ಮೊದಲು ಹಲವು ಆರೋಪ ಹೊಂದಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮುಂದಿನ 24 ಗಂಟೆ ಭಾರೀ ಮಳೆ ಸುರಿಯಲಿದೆ !