Select Your Language

Notifications

webdunia
webdunia
webdunia
webdunia

10 ರೂ. ಕೊಡಲಿಲ್ಲವೆಂದು ಗೆಳೆಯನ ಜೀವ ತೆಗೆದ ಪಾಪಿಗಳು!

10 ರೂ. ಕೊಡಲಿಲ್ಲವೆಂದು ಗೆಳೆಯನ ಜೀವ ತೆಗೆದ ಪಾಪಿಗಳು!
ಮುಂಬೈ , ಗುರುವಾರ, 28 ಅಕ್ಟೋಬರ್ 2021 (09:50 IST)
ಮುಂಬೈ: ಮದ್ಯಸೇವನೆಗೆ 10 ರೂ. ಕೊಡಲು ನಿರಾಕರಿಸಿದ್ದಕ್ಕೆ ಗೆಳೆಯರಿಬ್ಬರು 55 ವರ್ಷದ ವ್ಯಕ್ತಿಯನ್ನು ಹತ್ಯೆ ಮಾಡಿದ ಘಟನೆ ಮಹಾರಾಷ್ಟ್ರದ ಬುಲ್ದಾನಾ ಜಿಲ್ಲೆಯಲ್ಲಿ ನಡೆದಿದೆ.

ಮೂವರು ಗೆಳೆಯರು ಮದ್ಯದಂಗಡಿಗೆ ತೆರಳಿದ್ದರು. ಆರೋಪಿಗಳಾದ ಇಬ್ಬರು ಗೆಳೆಯರು 10 ರೂ. ಕೊಡಲು ಕೇಳಿದಾಗ ವ್ಯಕ್ತಿ ಕೊಡಲಿಲ್ಲ. ಇದರಿಂದ ಸಿಟ್ಟಿಗೆದ್ದ ಆರೋಪಿಗಳು ಮದ್ಯದಂಗಡಿಯಿಂದ ಹೊರಬರುತ್ತಲೇ ದಾಳಿ ಮಾಡಿದ್ದಾರೆ.

ತೀವ್ರ ಗಾಯಗೊಂಡ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಘಟನೆ ನಡೆದ ಒಂದು ಗಂಟೆಯೊಳಗೆ ಆರೋಪಿಗಳಿಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೋಟ್ಯಧಿಪತಿಯ ಹೆಂಡತಿ ಆಟೋ ಚಾಲಕನೊಂದಿಗೆ ಪರಾರಿ!