Select Your Language

Notifications

webdunia
webdunia
webdunia
webdunia

ಬ್ಯಾಂಕ್ ಉದ್ಯೋಗಿಗೆ ಕೊರೊನಾ : ಗ್ರಾಹಕರಿಗೆ ತಳಮಳ

ಬ್ಯಾಂಕ್ ಉದ್ಯೋಗಿಗೆ ಕೊರೊನಾ : ಗ್ರಾಹಕರಿಗೆ ತಳಮಳ
ಹಾವೇರಿ , ಶುಕ್ರವಾರ, 17 ಜುಲೈ 2020 (15:18 IST)
ಕೆನರಾ ಬ್ಯಾಂಕ್ ಉದ್ಯೋಗಿಯೊಬ್ಬರಿಗೆ ಕೊರೊನಾ ದೃಢಪಟ್ಟಿದ್ದು, ಅಲ್ಲಿನ ಸಿಬ್ಬಂದಿ ಹಾಗೂ ಗ್ರಾಹಕರಿಗೆ ತಳಮಳ ಶುರುವಾಗಿದೆ.

ಹಾವೇರಿಯಲ್ಲಿ ಕೆನರಾ ಬ್ಯಾಂಕ್ ಉದ್ಯೋಗಿ ಸೇರಿದಂತೆ ಜಿಲ್ಲೆಯಲ್ಲಿ  12 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. 33 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 334 ಕೋವಿಡ್-19 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, 244 ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. 7 ಮಂದಿ ಮೃತಪಟ್ಟಿದ್ದಾರೆ. 83 ಪ್ರಕರಣಗಳು ಸಕ್ರಿಯವಾಗಿವೆ.  



Share this Story:

Follow Webdunia kannada

ಮುಂದಿನ ಸುದ್ದಿ

ಈ ಜಿಲ್ಲೆಯಲ್ಲಿ ದಾಖಲೆಯಾಗಿದೆ ಎಂದ ಸ್ಪೀಕರ್