Publish Date: Mon, 13 Jul 2020 (21:02 IST)
Updated Date: Mon, 13 Jul 2020 (21:03 IST)
ಕರುನಾಡಿನಲ್ಲಿ ಡೆಡ್ಲಿ ಕೊರೊನಾ ಅಟ್ಟಹಾಸ ಮುಂದುವರಿದಿದ್ದು, 73 ಜನರನ್ನು ಬಲಿ ಪಡೆದುಕೊಂಡಿದೆ.
ಕರ್ನಾಟಕದಲ್ಲಿ ಒಂದೇ ದಿನ 2738 ಕೊರೊನಾ ಕೇಸ್ ಗಳು ದೃಢಪಟ್ಟಿವೆ. ಈ ಮೂಲಕ ಒಟ್ಟು ಪಾಸಿಟಿವ್ ಕೇಸ್ ಗಳ ಸಂಖ್ಯೆ 41581 ಕ್ಕೆ ತಲುಪಿದೆ.
ಮಾರಕ ವೈರಸ್ ಗೆ 73 ಜನರು ಸಾವನ್ನಪ್ಪಿದ್ದು, ಈವರೆಗೆ ರಾಜ್ಯದಲ್ಲಿ ಕೋವಿಡ್ ಗೆ 757 ಜನರು ಬಲಿಯಾದಂತಾಗಿದೆ.
839 ಜನರು ಗುಣಮುಖರಾಗಿ ಬಿಡುಗಡೆಗೊಂಡಿದ್ದು, 545 ಜನರು ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.