ಡೆಡ್ಲಿ ಕೊರೊನಾ ವೈರಸ್ 17 ದಿನಗಳ ಕಂದಮ್ಮನನ್ನು ಬಲಿಪಡೆದುಕೊಂಡಿದೆ.
ಮಾರಕ ಕೊರೊನಾಗೆ ಪುಟ್ಟ ಕಂದಮ್ಮ ಬಲಿಯಾದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಬೆಂಗಳೂರಿನ ಬೆಳ್ಳಂದೂರು ಖಾಸಗಿ ಆಸ್ಪತ್ರೆಯಲ್ಲಿ ಪುಟ್ಟ ಮಗು ಜೀವಬಿಟ್ಟಿದೆ.
ಕಂದಮ್ಮನನ್ನು ಕಳೆದುಕೊಂಡ ತಂದೆ – ತಾಯಿ ರೋದನ ಮುಗಿಲುಮುಟ್ಟಿತ್ತು.
ಕೊರೊನಾಗೆ ಬಲಿಯಾದ ಮಗುವಿನ ಅಂತ್ಯಸಂಸ್ಕಾರವನ್ನು ಅನಾಥ ಶವದಂತೆ ಮಾಡಿದ್ದು, ಪ್ರತ್ಯಕ್ಷ ದರ್ಶಿಗಳ ಕಣ್ಣಾಲೆ ತುಂಬಿ ಬಂದಿತ್ತು.