Select Your Language

Notifications

webdunia
webdunia
webdunia
webdunia

ಈ ಜಿಲ್ಲೆಯಲ್ಲಿ ದಾಖಲೆಯಾಗಿದೆ ಎಂದ ಸ್ಪೀಕರ್

ಈ ಜಿಲ್ಲೆಯಲ್ಲಿ ದಾಖಲೆಯಾಗಿದೆ ಎಂದ ಸ್ಪೀಕರ್
ಕಾರವಾರ , ಶುಕ್ರವಾರ, 17 ಜುಲೈ 2020 (15:15 IST)
ರಾಜ್ಯದ ಈ ಜಿಲ್ಲೆಯ ಪ್ರದೇಶದಲ್ಲಿ ದಾಖಲೆಯಾಗಿದೆ ಎಂದು ಸ್ಪೀಕರ್ ಹೇಳಿದ್ದಾರೆ.

ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನಲ್ಲಿ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ 65,800 ಮಾನವ ದಿನಗಳ ಕೆಲಸವಾಗಿದೆ. 1 ಕೋಟಿ 72 ಲಕ್ಷ ರೂ. ಖರ್ಚಾಗಿದೆ. ಇದು ಜಿಲ್ಲೆಯಲ್ಲಿಯೇ ದಾಖಲೆಯಾಗಿದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.  

ಸಿದ್ದಾಪುರದಲ್ಲಿ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು.

ಈ ಯೋಜನೆಯಲ್ಲಿ ಇನ್ನು ಒಂಭತ್ತು ತಿಂಗಳು ಕೆಲಸ ಸಿಗಲಿದ್ದು, ಇನ್ನಷ್ಟು ಅಭಿವೃದ್ಧಿಯಾಗಲಿದೆ. ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ತಾಲೂಕಿನಲ್ಲಿ ಕಾವಲು ಸಮಿತಿ ರಚಿಸಲಾಗಿದೆ.  ಅಲ್ಲದೇ ಅವರ ಕಾರ್ಯಚಟುವಟಿಕೆಗಳ ಬಗ್ಗೆಯೂ ಮಾರ್ಗದರ್ಶನ ಮಾಡಲಾಗಿದೆ. ಕೋವಿಡ್ ಸೋಂಕಿನ ಬಗ್ಗೆ ಜನರಲ್ಲಿ ತಪ್ಪು ಕಲ್ಪನೆ ಬೇಡ ಎಂದರು.



Share this Story:

Follow Webdunia kannada

ಮುಂದಿನ ಸುದ್ದಿ

ರೋಡಿಗಿಳಿದು ಪ್ರತಿಭಟಿಸಿದ ಕೊರೊನಾ ವಾರಿಯರ್ಸ್