Select Your Language

Notifications

webdunia
webdunia
webdunia
webdunia

ಪಿ ಎಸ್ ಐಗೆ ಕೊರೊನಾ : ವೈರಸ್ ನಿಂದ ಇಬ್ಬರ ಸಾವು

ಪಿ ಎಸ್ ಐಗೆ ಕೊರೊನಾ : ವೈರಸ್ ನಿಂದ ಇಬ್ಬರ ಸಾವು
ಹಾವೇರಿ , ಭಾನುವಾರ, 12 ಜುಲೈ 2020 (21:31 IST)
ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹಾಗೂ ಓರ್ವ ಸಿ ಆರ್ ಪಿ ಎಫ್ ಕಾನ್‍ಸ್ಟೇಬಲ್ ಸೇರಿದಂತೆ 14 ಜನರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಡೆಡ್ಲಿ ವೈರಸ್ ಗೆ ಇಬ್ಬರು ಮರಣ ಹೊಂದಿದ್ದಾರೆ.

ಹಾವೇರಿ ಜಿಲ್ಲೆಯಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್, ಜಮ್ಮುವಿನಿಂದ ಜಿಲ್ಲೆಗೆ ಆಗಮಿಸಿದ ಓರ್ವ ಸಿ.ಆರ್.ಪಿ.ಎಫ್ ಕಾನ್‍ಸ್ಟೇಬಲ್ ಸೇರಿದಂತೆ 14 ಸೇರಿದಂತೆ ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಇಬ್ಬರು ಸೋಂಕಿನಿಂದ ಮೃತಪಟ್ಟಿದ್ದಾರೆ. ಮೂವರು ಗುಣಮುಖರಾಗಿ ಆಸ್ಪತ್ರೆಯಿಂದ  ಬಿಡುಗಡೆ ಹೊಂದಿದ್ದಾರೆ.

ಹಾವೇರಿ ಜಿಲ್ಲೆಯಲ್ಲಿ ಈವರೆಗೆ 302 ಕೋವಿಡ್-19 ಪಾಸಿಟಿವ್ ಪ್ರಕರಣ ದೃಢಪಟ್ಟಿದ್ದು, 137 ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. 6 ಜನರು ಮೃತಪಟ್ಟಿದ್ದಾರೆ. 159 ಕೋವಿಡ್  ಪ್ರಕರಣಗಳು ಸಕ್ರಿಯವಾಗಿವೆ.



Share this Story:

Follow Webdunia kannada

ಮುಂದಿನ ಸುದ್ದಿ

ಈ ಜಿಲ್ಲೆಯಲ್ಲಿ 2,000 ಗಡಿ ದಾಟಿದ ಕೊರೊನಾ ಕೇಸ್