Publish Date: Tue, 14 Jul 2020 (20:33 IST)
Updated Date: Tue, 14 Jul 2020 (20:35 IST)
ರಾಜ್ಯದ ಈ ಜಿಲ್ಲೆಯಲ್ಲಿ ಮಹಾರಾಷ್ಟ್ರದಿಂದ ಬಂದವರಲ್ಲಿ ಕೊರೊನಾ ಸೋಂಕು ಪತ್ತೆಯಾಗುವುದು ಮುಂದುವರಿದಿದೆ.
ಕಲಬುರಗಿ ಜಿಲ್ಲೆಯಲ್ಲಿ ಕೊರೊನಾ ವೈರಸ್ ಒಂದೇ ದಿನದಲ್ಲಿ 121 ಜನರಲ್ಲಿ ದೃಢಪಟ್ಟಿದ್ದು, ಒಬ್ಬರು ಸಾವನ್ನಪ್ಪಿದ್ದಾರೆ.
ಮಹಾರಾಷ್ಟ್ರ ಸೇರಿದಂತೆ ವಿವಿಧೆಡೆಗಳಿಂದ ಜಿಲ್ಲೆಗೆ ಬಂದವರು ಹಾಗೂ ಸೋಂಕಿತರ ಸಂಪರ್ಕಕ್ಕೆ ಬಂದವರಲ್ಲಿ ವೈರಸ್ ಕಾಣಿಸಿಕೊಂಡಿದೆ.
ಇನ್ನು ಕಂಟೈನ್ ಮೆಂಟ್ ಝೋನ್ ನಲ್ಲಿದ್ದ ಜನರಲ್ಲೂ ಡೆಡ್ಲಿ ವೈರಸ್ ಇರುವುದು ದೃಢವಾಗಿದೆ. ಈ ಮೂಲಕ ಕಲಬುರಗಿಯಲ್ಲಿ ಈವರೆಗೆ 2313 ಕೊರೊನಾ ಕೇಸ್ ಗಳು ಪತ್ತೆಯಾದಂತೆ ಆಗಿವೆ. ಓರ್ವ ಸಾವನ್ನಪ್ಪಿದ್ದಾನೆ. 37 ಕ್ಕೆ ಸಾವನ್ನಪ್ಪಿದವರ ಸಂಖ್ಯೆ ತಲುಪಿದೆ.
13 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದರೆ 757 ಸಕ್ರಿಯ ಕೇಸ್ ಗಳಿಗೆ ಚಿಕಿತ್ಸೆ ಮುಂದುವರಿದಿದೆ.