Select Your Language

Notifications

webdunia
webdunia
webdunia
Sunday, 2 March 2025
webdunia

ಬ್ಯಾಂಕ್ ಭದ್ರತಾ ಸಿಬ್ಬಂದಿಯಿಂದ ಮಹಿಳೆಯರ ಮೇಲೆ ದೌರ್ಜನ್ಯ

ಬ್ಯಾಂಕ್ ಭದ್ರತಾ ಸಿಬ್ಬಂದಿಯಿಂದ ಮಹಿಳೆಯರ ಮೇಲೆ ದೌರ್ಜನ್ಯ
ಬೀದರ್ , ಬುಧವಾರ, 28 ನವೆಂಬರ್ 2018 (18:20 IST)
ಸಿಂಡಿಕೇಟ್ ಬ್ಯಾಂಕ್ ನಲ್ಲಿ ಭದ್ರತಾ ಸಿಬ್ಬಂದಿಯೊಬ್ಬ ಹಣ ಪಡೆಯಲು ಹೋದ ಸ್ವ-ಸಹಾಯ ಸಂಘದ ಮಹಿಳಾ ಸದಸ್ಯರನ್ನು ಅವಮಾನಿಸಿ ಬ್ಯಾಂಕ್ ನಿಂದ ಹೊರ ಹಾಕಿದ ಅಮಾನವೀಯ ಘಟನೆ ನಡೆದಿದೆ.

ಬೀದರ್ ಜಿಲ್ಲೆಯ ಬಸವಕಲ್ಯಾಣ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಬ್ಯಾಂಕ್ ಗೆ ಬರುವ ಮಹಿಳೆಯರು ಬಂದ ಕೆಲಸವಾಗದೆ ಬ್ಯಾಂಕ್ ಮುಂದೆ ಪರದಾಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಕಳೆದ ಒಂದು ವಾರದಿಂದ ಶ್ರೀ ಧರ್ಮಸ್ಥಳ ಮಂಜುನಾಥ ಗ್ರಾಮಾಭಿವೃದ್ದಿ ಸಂಘದ ಆಶ್ರಯದಲ್ಲಿ ತಾಲೂಕಿನಾದ್ಯಂತ ನಡೆಯುವ ಮಹಿಳಾ ಸ್ವಸಹಾಯ ಸಂಘದ ಮಹಿಳೆಯರು ಚೆಕ್ ತಗೆದುಕೊಂಡು ನಗರದ ಸಿಂಡಿಕೇಟ್ ಬ್ಯಾಂಕ್ ಬಳಿ ಬಂದು ಪರದಾಡುತ್ತಿದ್ದಾರೆ‌.

ಬ್ಯಾಂಕ್ ನಲ್ಲಿ ಮಹಿಳೆಯರಿಗೆ ಚೆಕ್ ಪಾಸ್ ಮಾಡಿಕೊಡುವುದನ್ನು ಬಿಟ್ಟು ಸಿಬ್ಬಂದಿಗಳು ಹೀಗೆ ಅಸಭ್ಯವಾಗಿ ವರ್ತಿಸಿರುವುದಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. 



Share this Story:

Follow Webdunia kannada

ಮುಂದಿನ ಸುದ್ದಿ

ಶೋಕಿ ಜೀವನಕ್ಕಾಗಿ ಬೈಕ್ ಕದಿಯುತ್ತಿದ್ದವರ ಕಥೆ ಏನಾಯ್ತು ಗೊತ್ತಾ?