Select Your Language

Notifications

webdunia
webdunia
webdunia
webdunia

ಪ್ರವಾಸಕ್ಕೆಂದು ಬಂದ ಅನಿವಾಸಿ ಭಾರತೀಯ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ

ಪ್ರವಾಸಕ್ಕೆಂದು ಬಂದ ಅನಿವಾಸಿ ಭಾರತೀಯ ಮಹಿಳೆ  ಮೇಲೆ ಸಾಮೂಹಿಕ ಅತ್ಯಾಚಾರ
ಲಕ್ನೋ , ಬುಧವಾರ, 28 ನವೆಂಬರ್ 2018 (06:54 IST)
ಲಕ್ನೋ : ಪ್ರವಾಸಕ್ಕೆಂದು ಬಂದ  ಮಹಿಳೆಯ ಮೇಲೆ ಪ್ರವಾಸಿ ಗೈಡ್ ಹಾಗೂ ಆತನ  ಸ್ನೇಹಿತರು ಸೇರಿ  ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಧಾರ್ಮಿಕ ಕ್ಷೇತ್ರಕ್ಕೆ ಭೇಟಿ ನೀಡಲು ಬಂದ ದಕ್ಷಿಣ ಆಫ್ರಿಕಾದಲ್ಲಿ ವಾಸವಿರುವ ಅನಿವಾಸಿ ಭಾರತೀಯ ಮಹಿಳೆ ಮಥುರಾದ ಗೋಕುಲ್ ಪ್ರದೇಶಕ್ಕೆ ಭೇಟಿ ನೀಡಿದಾಗ ಮೇಲೆ ಪ್ರವಾಸಿ ಗೈಡ್ ಮೋನು, ಹಾಗೂ ಆತನ ಸ್ನೇಹಿತ ವಿಷ್ಣು ಹಾಗೂ ಮತ್ತೋರ್ವ ಸೇರಿ ಅತ್ಯಾಚಾರ ಎಸಗಿದ್ದಾರೆ.

 

ಈ ಕುರಿತು ಸಂತ್ರಸ್ತೆಯ ಸ್ನೇಹಿತ ಮಥುರಾದ ಮಹಾವದನ್ ಠಾಣೆಯಲ್ಲಿ ದೂರು ನೀಡಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸೋಮವಾರ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಮತ್ತೋರ್ವ ಆರೋಪಿಸಿ ಪರಾರಿಯಾಗಿದ್ದು, ಆತನ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಸಾರ್ವಜನಿಕ ಲೆಕ್ಕಪತ್ರ ಸಮಿತಿಯಿಂದ ಚರ್ಚೆ