Publish Date: Sat, 24 Nov 2018 (08:52 IST)
Updated Date: Sat, 24 Nov 2018 (08:54 IST)
ಮುಂಬೈ: ನಾಲ್ವರು ಕಾಮುಕರಿಂದ ಸಾಮೂಹಿಕವಾಗಿ ಅತ್ಯಾಚಾರಕ್ಕೊಳಗಾಗಿದ್ದ ನಾಯಿ ವೈದ್ಯಕೀಯ ಉಪಚಾರದ ಹೊರತಾಗಿಯೂ ಮೃತಪಟ್ಟಿದೆ.
ಮೊನ್ನೆಯಷ್ಟೇ ನಾಲ್ವರು ಕಾಮುಕರು ನಾಯಿ ಮೇಲೆ ಅಸಹಜವಾಗಿ ಲೈಂಗಿಕ ತೃಷೆ ತೀರಿಸಿಕೊಂಡಿದ್ದು ಭಾರೀ ಸುದ್ದಿಯಾಗಿತ್ತು. ರಕ್ತದ ಮಡುವಿನಲ್ಲಿ ಬಿದ್ದಿದ್ದ ನಾಯಿಗೆ ಸ್ಥಳೀಯ ಪಶುವೈದ್ಯಕೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಹಾಗಿದ್ದರೂ ಅದು ಬದುಕುಳಿಯಲಿಲ್ಲ.
ವಿಪರೀತ ಗಾಯಗೊಂಡಿದ್ದರಿಂದ ನಾಯಿಯ ಅಂಗಾಂಗಳು ಸೋಂಕಿಗೆ ಒಳಗಾಗಿತ್ತು. ಹೀಗಾಗಿ ಮೂರು ದಿನ ಸತತ ಚಿಕಿತ್ಸೆಯ ಹೊರತಾಗಿಯೂ ನೋವು ತಾಳಲಾರದೆ ನಾಯಿ ಸಾವನ್ನಪ್ಪಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.