Select Your Language

Notifications

webdunia
webdunia
webdunia
webdunia

ಎತ್ತರ ನೋಡುವ ನೆಪದಲ್ಲಿ ಹುಡುಗಿಯ ಜತೆ ಅಸಭ್ಯವಾಗಿ ನಡೆದುಕೊಂಡ ಟ್ಯೂಷನ್ ಟೀಚರ್

ಎತ್ತರ ನೋಡುವ ನೆಪದಲ್ಲಿ ಹುಡುಗಿಯ ಜತೆ ಅಸಭ್ಯವಾಗಿ ನಡೆದುಕೊಂಡ ಟ್ಯೂಷನ್ ಟೀಚರ್
ಮುಂಬೈ , ಶುಕ್ರವಾರ, 23 ನವೆಂಬರ್ 2018 (08:55 IST)
ಮುಂಬೈ: ಎತ್ತರ ಎಷ್ಟೆಂದು ನೋಡುವ ನೆಪದಲ್ಲಿ ಮನೆಗೆ ಕರೆಸಿಕೊಂಡು ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಕಾಮುಕ ಟ್ಯೂಷನ್ ಶಿಕ್ಷಕನನ್ನು ಪೊಲೀಸರು ಬಂಧಿಸಿದ್ದಾರೆ.

ಮುಂಬೈನಲ್ಲಿ ಈ ಘಟನೆ ನಡೆದಿದ್ದು ಆರೋಪಿ ಶಿಕ್ಷಕ ರೆಹಾನ್ ಅನ್ಸಾರಿಯನ್ನು ಬಂಧಿಸಲಾಗಿದೆ. ಈತ ಖಾಸಗಿ ಟ್ಯೂಷನ್ ಕೇಂದ್ರವೊಂದನ್ನು ನಡೆಸುತ್ತಿದ್ದ ಎನ್ನಲಾಗಿದೆ.

ತನ್ನ ಟ್ಯೂಷನ್ ಕೇಂದ್ರಕ್ಕೆ ಪಾಠ ಹೇಳಿಸಿಕೊಳ್ಳಲು ಬರುತ್ತಿದ್ದ ಹುಡುಗಿಯನ್ನು ಸಂಜೆ ವೇಳೆ ಮನೆಗೆ ಕರೆಸಿಕೊಂಡ ಈತ ಅಸಭ್ಯವಾಗಿ ನಡೆದುಕೊಂಡಿದ್ದಾನೆ. ಈ ಸಂದರ್ಭದಲ್ಲಿ ಬಾಲಕಿ ಕಿರುಚಲು ಮುಂದಾದಾಗ ಬಲವಂತವಾಗಿ ಬಾಯಿ ಮುಚ್ಚಿಸಿದ್ದಾನೆ. ಆದರೆ ಅದು ಹೇಗೋ ಆತನಿಂದ ತಪ್ಪಿಸಿಕೊಂಡ ಬಾಲಕಿ ಪೊಲೀಸರಿಗೆ ದೂರು ನೀಡಿದ್ದಾಳೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಕಾರ್ ಪಾರ್ಕಿಂಗ್ ಜಾಗದಲ್ಲಿ ಮಗನ ಜತೆ ರಾಸಲೀಲೆ ಆಡಿದ ತಾಯಿ!