Select Your Language

Notifications

webdunia
webdunia
webdunia
webdunia

ಪತ್ನಿಯ ವಿರುದ್ಧ ಸಂಚು ನಡೆಸಿದ ಪತಿಮಹಾಶಯ

ಪತ್ನಿಯ ವಿರುದ್ಧ ಸಂಚು ನಡೆಸಿದ ಪತಿಮಹಾಶಯ
ನೋಯ್ಡಾ , ಮಂಗಳವಾರ, 20 ನವೆಂಬರ್ 2018 (09:29 IST)
ನೋಯ್ಡಾ: ಪತ್ನಿಯ ಮೊಬೈಲ್ ನಂಬರ್ ನ್ನು ಅಶ್ಲೀಲ ಸೈಟ್ ನಲ್ಲಿ ಪ್ರಕಟಿಸಿದ ಪತಿ ಮಹಾಶಯನನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಪತಿ ಖಾಸಗಿ ಕಂಪನಿಯೊಂದರಲ್ಲಿ ನೌಕರ. 2011 ರಲ್ಲಿ ಈತ ಪ್ರೀತಿಸಿ ಮದುವೆಯಾಗಿದ್ದ. ಆದರೆ ಮನಸ್ತಾಪದಿಂದಾಗಿ ಕಳೆದ 10 ತಿಂಗಳಿನಿಂದ ಗಂಡ-ಹೆಂಡತಿ ದೂರವಾಗಿದ್ದರು.

ಆದರೆ ಇದೀಗ ಪತ್ನಿಯ ಅಶ್ಲೀಲ ಫೋಟೋಗಳು, ಖಾಸಗಿ ಸಂದೇಶಗಳ ಜತೆಗೆ ಆಕೆಯ ಮೊಬೈಲ್ ನಂಬರ್ ನ್ನು  ವೆಬ್ ಸೈಟ್ ನಲ್ಲಿ ಪ್ರಕಟಿಸಿ ಕಿರುಕುಳ ನೀಡಿದ್ದ. ಈ ಬಗ್ಗೆ ಪತ್ನಿ ಪೊಲೀಸರಿಗೆ ದೂರು ನೀಡಿದ್ದಳು. ಮೊದಲು ತಲೆಮರೆಸಿಕೊಂಡಿದ್ದ ಆರೋಪಿ ಪತಿ ಈಗ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಅಮ್ಮನ ಸ್ನೇಹಿತನಿಂದಲೇ ಅಪ್ರಾಪ್ತೆ ಮೇಲೆ ನಿರಂತರ ಅತ್ಯಾಚಾರ