ಕ್ಷುಲಕ ಕಾರಣಕ್ಕೆ ಜಗಳವಾಡಿ ಹೆಂಡತಿ ಮಗುವನ್ನೇ ಕೊಡಲಿಯಿಂದ ಕೊಚ್ಚಿ ಕೊಂದ ಪಾಪಿ

ಶುಕ್ರವಾರ, 9 ನವೆಂಬರ್ 2018 (07:18 IST)
ಬಾಂದಾ : ವ್ಯಕ್ತಿಯೊಬ್ಬ ತನ್ನ ಹೆಂಡತಿ, ಮಗುವಿನ ಜೊತೆ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸುವ ಬದಲು ಅಂದೇ ಅವರನ್ನು ಕೊಲೆ ಮಾಡಿದ ಘಟನೆ  ಉತ್ತರ ಪ್ರದೇಶದ ಬಾಂದಾ ಗರ್ಗಪುರಾವ ಗ್ರಾಮದಲ್ಲಿ ನಡೆದಿದೆ.


ದೀಪಾವಳಿ ಹಬ್ಬದಂದು ವ್ಯಕ್ತಿಯೊಬ್ಬ ತನ್ನ ಹೆಂಡತಿಯ ಜೊತೆ ಜಗಳವಾಡಿದ್ದಾನೆ. ಸಣ್ಣ ಕಾರಣಕ್ಕೆ ಶುರುವಾದ ಜಗಳ ವಿಕೋಪಕ್ಕೆ ತಿರುಗಿದಾಗ ವ್ಯಕ್ತಿ ಸ್ವಲ್ಪವು ಕರುಣೆ ತೋರದೆ ತನ್ನ ಹೆಂಡತಿ ಮತ್ತು ಒಂದು ತಿಂಗಳ ಮಗುವನ್ನು ಕೊಡಲಿಯಿಂದ ಕೊಚ್ಚಿ ಕೊಂದು ಪರಾರಿಯಾಗಿದ್ದಾನೆ.


ಈ ಪ್ರಕರಣ ಬಾಂದಾ ಪೊಲೀಸ್​ ಠಾಣೆಯಲ್ಲಿ ದಾಖಲಾಗಿದ್ದು, ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಜಮೀನಿಗಾಗಿ ಒಡಹುಟ್ಟಿದ ಅಣ್ಣನನ್ನೇ ಬರ್ಬರವಾಗಿ ಕೊಂದ ಪಾಪಿ ತಮ್ಮ