ಜಮೀನಿಗಾಗಿ ಒಡಹುಟ್ಟಿದ ಅಣ್ಣನನ್ನೇ ಬರ್ಬರವಾಗಿ ಕೊಂದ ಪಾಪಿ ತಮ್ಮ

ಶುಕ್ರವಾರ, 9 ನವೆಂಬರ್ 2018 (07:16 IST)
ಹುಬ್ಬಳ್ಳಿ : ಜಮೀನಿಗಾಗಿ ವ್ಯಕ್ತಿಯೊಬ್ಬ ಒಡಹುಟ್ಟಿದ ಅಣ್ಣನನ್ನೇ ದೀಪಾವಳಿ ಹಬ್ಬದಂದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿಯ ಗೋಕುಲ ಗ್ರಾಮದಲ್ಲಿ ನಡೆದಿದೆ.


ಭೀಮಶಿ ಬೆಂಗೇರಿ (36) ಕೊಲೆಯಾದ ದುರ್ದೈವಿ, ಬಸು ಬೆಂಗೇರಿ (34)  ಕೊಲೆ ಮಾಡಿದ ಆರೋಪಿ. ಇವರಿಬ್ಬರು ಇತ್ತೀಚೆಗಷ್ಟೇ ಜಮೀನನ್ನು ಭಾಗ ಮಾಡಿಕೊಂಡಿದ್ದರು. ಆದರೆ ಬಸು ಬೆಂಗೇರಿ ಕೇಳಿದ್ದ ಜಮೀನನ್ನು ಭೀಮಶಿ ಬಿಟ್ಟುಕೊಟ್ಟಿರಲಿಲ್ಲ. ಈ ಬಗ್ಗೆ ಇಬ್ಬರಿಗೂ ಆಗಾಗ ಜಗಳವಾಡುತ್ತಿದ್ದರು. ನಂತರ ಕಳೆದ ಎರಡು ದಿನಗಳ ಹಿಂದೆ ಗ್ರಾಮದ ಮುಖ್ಯಸ್ಥರು ಇವರಿಬ್ಬರ ನಡುವೆ ರಾಜಿ ಪಂಚಾಯಿತಿಯನ್ನು ನಡೆಸಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.


ಆದರೆ ಇದೀಗ ಈ ಜಗಳ ತಾರಕಕ್ಕೇರಿ ಸಿಟ್ಟಿಗೆದ್ದ ಬಸು ಗುರುವಾರ ತನ್ನ ಅಣ್ಣ ಭೀಮಶಿಯನ್ನು ಚಾಕುವಿನಿಂದ 9 ಬಾರಿ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ . ಈ ಘಟನೆಯ ಬಳಿಕ ಆತ ಪೊಲೀಸರಿಗೆ ಶರಣಾಗಿದ್ದಾನೆ. ಈ ಪ್ರಕರಣ ಗೋಕುಲ್ ರೋಡ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಜೆಡಿಎಸ್ ನ ಶಾಸಕನಿಗೆ ಮತ ನೀಡಿದ ಮತದಾರನಿಂದಲೇ ಜೀವ ಬೆದರಿಕೆ