ಮರ್ಯಾದಾ ಹತ್ಯೆ ಪ್ರಕರಣ: ಮೂವರು ಆರೋಪಿಗಳ ಬಂಧನ

ಗುರುವಾರ, 8 ನವೆಂಬರ್ 2018 (16:12 IST)
ನಾಲ್ಕು ತಿಂಗಳ ಗರ್ಭಿಣಿಯನ್ನು ಮರ್ಯಾದೆ ಹತ್ಯೆ ಮಾಡಿರುವ  ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ವಿಜಯಪುರ ಜಿಲ್ಲೆಯ ನಿಡಗುಂದಿ ಹತ್ತಿರದ ಯಲಗೂರುದಲ್ಲಿ ನಾಲ್ಕು ತಿಂಗಳ ಗರ್ಭಿಣಿ ರೇಣುಕಾ(24)ಳನ್ನು ಕತ್ತು ಸೀಳಿ ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರನ್ನು ನಿಡಗುಂದಿ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳಾದ ರೇಣುಕಾಳ ತಾಯಿ ಶಿವಲಿಂಗಮ್ಮ, ಸಹೋದರ ಮಲ್ಲಿಕಾರ್ಜುನ ಹಾಗೂ ರೇಣುಕಾಳ ತಂಗಿಯ ಗಂಡ ರಮೇಶನನ್ನು ಬಂಧನ ಮಾಡಲಾಗಿದೆ.

ಅನ್ಯಜಾತಿಯ ಶಂಕರ್ ಎಂಬಾತನನ್ನು ಪ್ರೀತಿಸಿ ಮದುವೆಯಾದ ಕಾರಣಕ್ಕೆ ರೇಣುಕಾಳನ್ನು ಆಕೆಯ ಮನೆಯವರೇ ಕೊಲೆ ಮಾಡಿ ಪರಾರಿಯಾಗಿದ್ದರು. ಘಟನೆ ನಡೆದು 24 ಗಂಟೆಗಳಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.


ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಶ್ರೀರಾಮುಲು ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದಿದ್ದಾರೆಂದ ಮಾಜಿ ಶಾಸಕ