ದೀಪಾವಳಿ ಹಬ್ಬದ ದಿನವೇ ಮರ್ಯಾದಾ ಹತ್ಯೆಗೆ ನಾಲ್ಕು ತಿಂಗಳ ಗರ್ಭಿಣಿ ಬಲಿ

ಬುಧವಾರ, 7 ನವೆಂಬರ್ 2018 (14:57 IST)
ದೀಪಾವಳಿ ಹಬ್ಬದ ದಿನವೇ ಮರ್ಯಾದಾ ಹತ್ಯೆಗೆ ನಾಲ್ಕು ತಿಂಗಳ ಗರ್ಭಿಣಿ ಬಲಿಯಾದ ಘಟನೆ ನಡೆದಿದೆ. ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಯಲಗೂರ ಗ್ರಾಮದಲ್ಲಿ ಘಟನೆ ನಡೆದಿದೆ. ಮನೆಯಲ್ಲಿದ್ದ ವೇಳೆ 22 ವರ್ಷದ ರೇಣುಕಾಳನ್ನು ಕತ್ತು ಕುಯ್ದು ಕೊಲೆ ಮಾಡಿ ಸಂಬಂಧಿಕರು ಪರಾರಿಯಾಗಿದ್ದಾರೆ.

ಕಳೆದ ಎರಡು ವರ್ಷದ ಹಿಂದೆ ಅನ್ಯ ಜಾತಿಯ ಯುವಕ ಶಂಕರನನ್ನು ಪ್ರೀತಿಸಿ ಮದುವೆಯಾಗಿದ್ದಳು ರೇಣುಕಾ.
ರಾಯಚೂರ ಜಿಲ್ಲೆಯ ಶಿರವಾರ ಗ್ರಾಮದ ಶಂಕರ ಹಾಗೂ ಕ್ಯಾದಿಗೇರಿ ಗ್ರಾಮದ ರೇಣುಕಾ ಪ್ರೀತಿಸಿ ಮದುವೆಯಾಗಿದ್ದ ಜೋಡಿಗಳಾಗಿದ್ದಾರೆ.

ಮದುವೆ ಬಳಿಕ ಯಲಗೂರನಲ್ಲಿ ಬಂದು ವಾಸವಾಗಿದ್ದು ಜೀವನ ನಡೆಸುತ್ತಿದ್ದರು. ಯುವಕ‌ ಶಂಕರ ಸ್ಥಳೀಯ ಮೊಬೈಲ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದನು. ತಾಯಿಯ ಮೇಲೆ ಪ್ರೀತಿ ಇಟ್ಟುಕೊಂಡಿದ್ದ ರೇಣುಕಾ ತಾಯಿಯ ಜೀವ ನೆನೆಸುತ್ತಿದೆ ಎಂದು ತವರು ಮನೆಗೆ ಕರೆ ಮಾಡಿದ್ದಳು. ರೇಣುಕಾಳನ್ನು ನೋಡುವ ನೆಪ ಮಾಡಿ ವಾರದ ಹಿಂದೆ ಬಂದು ಯಲಗೂರನಲ್ಲಿಯೇ ಉಳಿದುಕೊಂಡಿದ್ದರು ಸಂಬಂಧಿಕರು.

ರೇಣುಕಾ ತಾಯಿ, ರೇಣುಕಾ ಸಹೋದರ ಹಾಗೂ ರೇಣುಕಾ ತಂಗಿಯ ಗಂಡ ಬಂದಿದ್ದರು. ಶಂಕರ ಮೊಬೈಲ್ ಅಂಗಡಿಗೆ ಕೆಲಸಕ್ಕೆ ಹೋದ ಸಮಯದಲ್ಲಿ ರೇಣುಕಾಳ ಕತ್ತು ಸೀಳಿ ಕೊಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದಾರೆ. 
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.  

 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಆದಿಚುಂಚನಗಿರಿ ಮಠಕ್ಕೆ ಮಂಡ್ಯ ನೂತನ ಸಂಸದ ಭೇಟಿ