ಜಗಳ ತಾರಕಕ್ಕೇರಿ ಮಗನನ್ನೇ ಕೊಂದ ದಂಪತಿ

ಬುಧವಾರ, 7 ನವೆಂಬರ್ 2018 (08:46 IST)
ಪಾಟ್ನಾ: ವೈಯಕ್ತಿಕ ಬದುಕಿನ ವಿಚಾರವಾಗಿ ತಂದೆ-ತಾಯಿ ಮತ್ತು ಮಗನ ನಡುವೆ ನಡೆದ ವಾಗ್ದಾವ ಕೊಲೆಯಲ್ಲಿ ಅಂತ್ಯವಾದ ಘಟನೆ ಬಿಹಾರದಲ್ಲಿ ನಡೆದಿದೆ.
 

ಅರ್ಬಿಂಗ್ ಕುಮಾರ್ ಚೌರಾಸಿಯಾ (28 ವರ್ಷ) ಎಂಬಾತ ಕೊಲೆಗೀಡಾದ ದುರ್ದೈವಿ. ಪುತ್ರನ ಜತೆಗೆ ಆತನ ವೈಯಕ್ತಿಕ ಬದುಕಿನ ವಿಚಾರವಾಗಿ ವಾಗ್ವಾದಕ್ಕಿಳಿದ ದಂಪತಿ ಜಗಳ ತಾರಕಕ್ಕೇರಿ ಆತನಿಗೆ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ಈ ಸಂದರ್ಭದಲ್ಲಿ ಆತ ಸಾವಿಗೀಡಾಗಿದ್ದಾನೆ.

ಈ ಸಂಬಂಧ ಇದೀಗ ಆರೋಪಿ ಪೋಷಕರನ್ನು ಪೊಲೀಸರು ಬಂಧಿಸಿದ್ದಾರೆ. ಪತ್ನಿಯನ್ನು ತ್ಯಜಿಸಿದ್ದ ಮೃತ ಅರ್ಬಿಂದ್ ವಿವಾಹೇತರ ಸಂಬಂಧ ಹೊಂದಿದ್ದ. ಇದೇ ಕಾರಣಕ್ಕೆ ಆಗಾಗ ಪೋಷಕರು ಜತೆ ಜಗಳವಾಡುತ್ತಿದ್ದ. ಆದರೆ ಈ ಬಾರಿ ಮಾತ್ರ ಪರಿಸ್ಥಿತಿ ವಿಕೋಪಕ್ಕೆ ಹೋಯಿತು ಎಂದು ವಿಚಾರಣೆಯಿಂದ ತಿಳಿದುಬಂದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ರಾಜ್ಯೋತ್ಸವ ನಿಮಿತ್ತ ಶೇ. 50 ರಿಯಾಯಿತಿ ದರದಲ್ಲಿ ಪುಸ್ತಕ ಮಾರಾಟ