ತಂದೆ-ಅಜ್ಜಿಯನ್ನೇ ಕೊಲೆ ಮಾಡಿ ಕಥೆ ಹೆಣೆದ ಭೂಪ ಅಂದರ್

ಸೋಮವಾರ, 5 ನವೆಂಬರ್ 2018 (19:09 IST)
ತನ್ನ ತಂದೆ ಹಾಗೂ ಅಜ್ಜಿಯನ್ನೇ ಕೊಲೆ ಮಾಡಿ ಆ ಬಳಿಕ ತಮ್ಮ ಮನೆಗೆ ಐವರು ದರೋಡೆಕೋರರು ತನ್ನ ತಂದೆಯನ್ನು ಕೊಲೆ ಮಾಡಿ ಅಜ್ಜಿ ಹತ್ತಿರವಿದ್ದ ಚಿನ್ನದ ಸರ ದೋಚಿಕೊಂಡು ಪರಾರಿಯಾಗಿದ್ದರು ಎಂದು ಸುಳ್ಳುಕಥೆ ಕಟ್ಟಿದ್ದಲ್ಲದೇ ಸುಳ್ಳು ದೂರು ದಾಖಲು ಮಾಡಿದ್ದ ಮಗನೇ ಕೊಲೆಗಾರನೆಂಬ ವಿಷಯ ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ.

ಕಲಬುರಗಿ ಜಿಲ್ಲೆಯಲ್ಲಿ ಐವರು ದರೋಡೆಕೋರರು ತಮ್ಮ ಮುಖಕ್ಕೆ ಕಪ್ಪು ಬಟ್ಟೆ ಕಟ್ಟಿಕೊಂಡು ಮನೆಗೆ ನುಗ್ಗಿ ದಾಳಿ ಮಾಡಿದ ಕಾರಣ ಬಸವರಾಜ ಎಂಬುವರು ಸಾವನ್ನಪ್ಪಿದ್ದು, ಬಾಲಮ್ಮ ಎಂಬುವರ ಬಳಿ ಇದ್ದ ಚಿನ್ನದ ಸರ ದೋಚಿಕೊಂಡು ಪರಾರಿಯಾಗಿದ್ದರು ಎಂದು ಮಗ ವೆಂಕಟೇಶ್ ದೂರು ನೀಡಿದ್ದನು.

ಆದರೆ ಪೊಲೀಸ್ ತನಿಖೆ ವೇಳೆ ದೂರು ನೀಡಿದ್ದ ವೆಂಕಟೇಶ್ ನೇ ಕೊಲೆ ಮಾಡಿ ಸುಳ್ಳು ಆರೋಪ ಹಾಗೂ ಪ್ರಕರಣ ದಾಖಲಿಸಿದ್ದನೆಂಬ ವಿಷಯ ಬೆಳಕಿಗೆ ಬಂದಿದೆ. ಮುಧೋಳ ಪೊಲೀಸರು ಆರೋಪಿ ವೆಂಕಟೇಶನನ್ನು ಬಂಧಿಸಿದ್ದಾರೆ.ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ದೀಪಾವಳಿಯಲ್ಲಿ ಈ ಸಮಯದಲ್ಲಿ ಮಾತ್ರ ಪಟಾಕಿ ಸಿಡಿಸಲು ಅವಕಾಶ