Publish Date: Fri, 02 Nov 2018 (11:06 IST)
Updated Date: Fri, 02 Nov 2018 (11:08 IST)
ಬೆಂಗಳೂರು: ನಟ ದುನಿಯಾ ವಿಜಿ ಮೊದಲ ಪತ್ನಿಯರ ಕಿತ್ತಾಟಕ್ಕೆ ಇಂದು ಮತ್ತೊಂದು ಟ್ವಿಸ್ಟ್ ಸಿಗುವ ಸಾಧ್ಯತೆಯಿದೆ. ತಲೆಮರೆಸಿಕೊಂಡಿರುವ ನಾಗರತ್ನ ಶರಣಾಗತಿಯಾಗುವ ಸಾಧ‍್ಯತೆಯಿದೆ.
ಕಳೆದ ಆರು ದಿನಗಳಿಂದ ನಾಗರತ್ನಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸಿದರೂ ಪ್ರಯೋಜನವಾಗಿಲ್ಲ. ಇದರ ನಡುವೆ ಪೊಲೀಸರ ಬಂಧನ ತಪ್ಪಿಸಲು ನಾಗರತ್ನ ಪರ ವಕೀಲರು ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರೂ ಇದುವರೆಗೆ ಸಿಗದ ಕಾರಣ ಪೊಲೀಸರಿಗೆ ಶರಣಾಗತಿಯಾಗುವ ನಿರೀಕ್ಷೆಯಿದೆ.
ದುನಿಯಾ ವಿಜಿ ಹಲ್ಲೆ ಪ್ರಕರಣ ಸಂಬಂಧಿಸಿದಂತೆ ಜೈಲು ಪಾಲಾಗಿದ್ದಾಗ ವಿಜಿ ಮನೆಗೆ ನುಗ್ಗಿದ್ದ ನಾಗರತ್ನ ಎರಡನೇ ಪತ್ನಿ ಕೀರ್ತಿ ಗೌಡ ಮೇಲೆ ಹಲ್ಲೆ ನಡೆಸಿದ್ದರು. ಈ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೀರ್ತಿ ಗೌಡ ದೂರು ದಾಖಲಿಸಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.