Select Your Language

Notifications

webdunia
webdunia
webdunia
Tuesday, 22 April 2025
webdunia

ಕೀರ್ತಿಗೌಡ ವಿರುದ್ಧ ನಾಗರತ್ನ ದಾಖಲಿಸಿದ ಹಲ್ಲೆ ಪ್ರಕರಣಕ್ಕೆ ಹೊಸ ಟ್ವಿಸ್ಟ್

ಬೆಂಗಳೂರು
ಬೆಂಗಳೂರು , ಸೋಮವಾರ, 29 ಅಕ್ಟೋಬರ್ 2018 (07:04 IST)
ಬೆಂಗಳೂರು : ನಟ ದುನಿಯಾ ವಿಜಯ್ ಜೈಲಿನಲ್ಲಿದ್ದ ಸಂದರ್ಭದಲ್ಲಿ ಅವರ ಮೂರನೇ ಪತ್ನಿ ಕೀರ್ತಿಗೌಡ ತನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ವಿಜಯ್ ಅವರ  ಮೊದಲನೇ ಪತ್ನಿ ನಾಗರತ್ನ ದೂರು ದಾಖಲಿಸಿದ್ದರು, ಆದರೆ ಇದೀಗ ಈ ಪ್ರಕರಣಕ್ಕೆ ಹೊಸ ಟ್ವಿಸ್ಟ್  ಸಿಕ್ಕಿದೆ.

ಹೌದು. ಜಿಮ್ ಟ್ರೈನರ್ ಪಾನಿಪುರಿ ಕಿಟ್ಟಿ ಅವರ ಅಣ್ಣನ ಮಗ ಮಾರುತಿಗೌಡರನ್ನು ಅಪಹರಣ  ಮಾಡಿ, ಹಲ್ಲೆ ನಡೆಸಿದ ಆರೋಪದ ಮೇರೆಗೆ ವಿಜಯ್ ನ್ಯಾಯಾಂಗ ಬಂಧನದಲ್ಲಿದ್ದರು.  ಈ  ವೇಳೆ ವಿಜಯ್ ಅವರ ಮೊದಲನೇ ಪತ್ನಿ ನಾಗರತ್ನ ತನ್ನ ಮಕ್ಕಳನ್ನು ನೋಡಲು ಕೀರ್ತಿಗೌಡ ಮನೆಗೆ ಬಂದಿದಾಗ ಆಕೆ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ನಾಗರತ್ನ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

 

ಆದರೆ ಇದೀಗ ಈ ಘಟನೆಗೆ ಸಂಬಂಧಪಟ್ಟ ಸಿಸಿಟಿವಿ ದೃಶ್ಯಾವಳಿ ಲಭ್ಯವಾಗಿದ್ದು, ಅದರಲ್ಲಿ ಹೊಸಕೆರೆ ಹಳ್ಳಿಯಲ್ಲಿ ಇರುವ ಮನೆಗೆ  ಏಕಾಏಕಿ  ನುಗ್ಗಿದ್ದ ನಾಗರತ್ನ,  ಮನೆಯಲ್ಲಿ ಕುಳಿತಿದ್ದ ಕೀರ್ತಿಗೌಡ ಮೇಲೆ ಚಪ್ಪಲಿಯಿಂದ  ಹಲ್ಲೆ ನಡೆಸಿದ್ದಾರೆ. ನಂತರ ಪೊಲೀಸ್ ಠಾಣೆಗೆ ಬಂದು ಕೀರ್ತಿಗೌಡ ವಿರುದ್ಧ  ಸುಳ್ಳು ಆರೋಪ ಮಾಡಿ ದೂರು ದಾಖಲಿಸಿದ್ದಾರೆ ಎಂಬ ಸ್ಪೋಟಕ ಮಾಹಿತಿ ಸಿಸಿಟಿವಿ ದೃಶ್ಯಾವಳಿಯಿಂದ  ಬಹಿರಂಗವಾಗಿದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 


Share this Story:

Follow Webdunia kannada

ಮುಂದಿನ ಸುದ್ದಿ

ಫಿಲ್ಮ ಚೇಂಬರ್ ನಲ್ಲಿ ಚರ್ಚೆ ನಡೆಸಿದ್ದರೂ ಕೂಡ ಶೃತಿ ಸರ್ಜಾ ವಿರುದ್ಧ ದೂರು ದಾಖಲಿಸಿದ್ದು ಯಾಕೆ ಗೊತ್ತಾ?