Select Your Language

Notifications

webdunia
webdunia
webdunia
webdunia

ಫಿಲ್ಮ ಚೇಂಬರ್ ನಲ್ಲಿ ಚರ್ಚೆ ನಡೆಸಿದ್ದರೂ ಕೂಡ ಶೃತಿ ಸರ್ಜಾ ವಿರುದ್ಧ ದೂರು ದಾಖಲಿಸಿದ್ದು ಯಾಕೆ ಗೊತ್ತಾ?

webdunia
ಬೆಂಗಳೂರು , ಸೋಮವಾರ, 29 ಅಕ್ಟೋಬರ್ 2018 (06:44 IST)
ಬೆಂಗಳೂರು : ಫಿಲ್ಮ ಚೇಂಬರ್ ನಲ್ಲಿ ಸಂಧಾನ ಸಭೆ ನಡೆಸಿ ನಿರ್ಧಾರ ಹೇಳಲು ಕಾಲಾವಕಾಶ ಕೊಟ್ಟರು ಕೂಡ  ನಟಿ ಶೃತಿ ಹರಿಹರನ್ ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ದೂರು ದಾಖಲಿಸಲು ನಿಜವಾದ ಕಾರಣ ಏನೆಂಬುದು ಇದೀಗ ಬಯಲಾಗಿದೆ.


ನಟಿ ಶೃತಿ ಹರಿಹರನ್ ಅರ್ಜುನ್ ಸರ್ಜಾ ಮೇಲೆ ಮಾಡಿದ ಆರೋಪದ ಬಗ್ಗೆ ಫಿಲ್ಮ ಚೇಂಬರ್ ನಲ್ಲಿ ಚರ್ಚೆ ಮಾಡಿದ್ದರೂ ಕೂಡ ನಂತರ ನಟಿ ಶೃತಿ ಅರ್ಜುನ್ ಸರ್ಜಾ ವಿರುದ್ಧ ಠಾಣೆಯಲ್ಲಿ ಲೈಂಗಿಕ ಕಿರುಕುಳ ದೂರು ದಾಖಲಿಸಿದ್ದರು. ಇದರಿಂದ ಫಿಲ್ಮ ಚೇಂಬರ್ ನಲ್ಲಿ ಚರ್ಚೆಯಲ್ಲಿ ಭಾಗವಹಿಸಿದ್ದ ಹಿರಿಯರ ಮಾತಿಗೆ ಶೃತಿ ಬೆಲೆ ಕೊಡಲಿಲ್ಲ ಎಂಬ ಬೇಸರ ಎಲ್ಲರಲ್ಲೂ ಮೂಡಿತ್ತು. ಆದರೆ ಅವರು ಈ ರೀತಿ ಮಾಡಲು ಕಾರಣವೆನೆಂಬುದು ಇದೀಗ ಬಯಲಾಗಿದೆ.


ಶೃತಿ ಹರಿಹರನ್ ಅವರಲ್ಲಿ ಹಿರಿಯ ನಟ ಅಂಬರೀಶ್ ಅವರು, ‘ಸರ್ಜಾನಾ ನಾನು ಮನವೊಲಿಸ್ತೀನಿ. ನೀನು ದೂರು ಕೊಡಲ್ಲ ಅಂತಾ ಪ್ರಾಮಿಸ್ ಮಾಡು ಅಂತಾ ಶೃತಿ ಮನವೊಲಿಸಿದರು. ಜೊತೆಗೆ ಮಾಧ್ಯಮದ ಮುಂದೆ ನೀನು ಸರ್ಜಾ ಶೇಕ್‍ಹ್ಯಾಂಡ್ ಮಾಡಿ ಇಲ್ಲೆ ಎಲ್ಲಾ ಇತ್ಯರ್ಥ ಮಾಡ್ಕೋಬೇಕು ಎಂದಾಗ ಶೃತಿ ಇದಕ್ಕೆ ಓಕೆ ಎಂದಿದ್ದರಂತೆ. ಆದರೆ ಅರ್ಜುನ್ ಸರ್ಜಾ ಮಾತ್ರ ಸಂಧಾನಕ್ಕೂ ಬರುವ ಮುನ್ನವೇ ಶೃತಿ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಿದರು. ಅಲ್ಲದೇ ಅಂಬರೀಶ್ ಅವರು,’’ ನೀನು ತಪ್ಪು ಮಾಡದೇ ಇರಬಹುದು, ಅದಕ್ಕಾಗಿಯೇ ಶೃತಿ ಬಳಿ ಇದು ನನ್ನ ಅರಿವಿಗೆ ಬಾರದೇ ಆಗಿರೋದು, ಪಾತ್ರದಲ್ಲಿ ಇನ್ವಾಲ್ ಆಗಿರುವ ಸಮಸ್ಯೆ ಇರಬಹುದು. ನನ್ನ ಮಗಳಂತೆ ನೀನು ತಪ್ಪಾಗಿ ಅರ್ಥೈಸಿಕೊಳ್ಳದೇ ಇಲ್ಲಿಗೆ ಬಿಟ್ಟು ಬಿಡು” ಅಂತಾ ಶೃತಿ ಬಳಿ ಒಂದು ಮಾತು ಹೇಳಿ ಅಂತಾ ಸರ್ಜಾಗೆ ಹೇಳಿದ್ದರಂತೆ.


ಆದರೆ ಅಂಬರೀಶ್ ಅವರ ಮಾತಿಗೆ ಕೇರ್ ಮಾಡದ ಸರ್ಜಾ ಹಾಗೂ ಧ್ರುವ ಸರ್ಜಾ ನಾವು ಕೋರ್ಟ್‍ನಲ್ಲಿ ನೋಡ್ಕೋತಿವಿ ಅಂತಾ ಹೇಳಿದ್ದರಂತೆ. ಇದರಿಂದ ಕೋಪಗೊಂಡ ಶೃತಿ ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ದೂರು ದಾಖಲಿಸಿದ್ದಾರೆ ಎನ್ನಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮಾವ ಅರ್ಜುನ್ ಸರ್ಜಾ ನಂತರ ಅಳಿಯ ಚಿರಂಜೀವಿ ಸರ್ಜಾ ಕೂಡ ಮೀಟೂ ಆರೋಪಕ್ಕೆ ಗುರಿಯಾದ್ರಾ?