ದೀಪಾವಳಿ ಹಬ್ಬದ ಪ್ರಯುಕ್ತ ಏರ್ಟೆಲ್ ಗ್ರಾಹಕರಿಗೆ ನೀಡುತ್ತಿದೆ ಬಂಪರ್ ಆಫರ್

ಭಾನುವಾರ, 28 ಅಕ್ಟೋಬರ್ 2018 (07:25 IST)
ಬೆಂಗಳೂರು : ದೀಪಾವಳಿ ಹಬ್ಬದ ಪ್ರಯುಕ್ತ ಏರ್ಟೆಲ್ ತನ್ನ ಗ್ರಾಹಕರಿಗೆ ಬಂಪರ್ ಆಫರ್ ವೊಂದನ್ನು  ನೀಡುತ್ತಿದ್ದು, ಈ ಆಫರ್ ಮೂಲಕ ಗ್ರಾಹಕರು 2 ಸಾವಿರ ದೂಪಾಯಿಯವರೆಗೆ ಲಾಭ ಪಡೆಯಬಹುದಾಗಿದೆ.


ಆದರೆ ಈ ಆಫರ್ ಹೊಸದಾಗಿ 4ಜಿ ಸ್ಮಾರ್ಟ್ಫೋನ್ ಖರೀದಿ ಮಾಡಿದ ಗ್ರಾಹಕರಿಗೆ ಮಾತ್ರ ಲಭಿಸಲಿದ್ದು, ಹೊಸದಾಗಿ 4ಜಿ ಸ್ಮಾರ್ಟ್ಫೋನ್ ಖರೀದಿ ಮಾಡಿದ ಗ್ರಾಹಕರಿಗೆ ಏರ್ಟೆಲ್ 2 ಸಾವಿರ ರೂಪಾಯಿ ಕ್ಯಾಶ್ ಬ್ಯಾಕ್ ನೀಡಲಿದೆಯಂತೆ. ಏರ್ಟೆಲ್ ನ ಆಪ್ ಮೂಲಕ ಗ್ರಾಹಕರ ಖಾತೆಗೆ ಹಣ ಜಮಾ ಆಗಲಿದೆ.


ಆದರೆ ಹಣ ಮಾತ್ರ ಕೂಪನ್ ರೂಪದಲ್ಲಿ ಸಿಗಲಿದ್ದು, 50 ರೂಪಾಯಿ ಬೆಲೆಯ 40 ಕೂಪನ್ ಖಾತೆಗೆ ಜಮಾ ಆಗಲಿದೆ. ಈ ಕೂಪನ್ ನನ್ನು ಗ್ರಾಹಕರು 199 ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ರಿಚಾರ್ಜ್ ಗೆ ಉಪಯೋಗಿಸಬಹುದಾಗಿದೆ.  ಆದರೆ ರಿಚಾರ್ಜ್ ಮಾಡುವ ವೇಳೆ ಒಂದು ಕೂಪನ್ ನನ್ನು ಒಂದು ಬಾರಿ ಮಾತ್ರ ಬಳಸಬಹುದಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಸ್ಕೂಲ್ ಬಸ್ ನಲ್ಲಿ ಮನೆಗೆ ಬರುತ್ತಿದ್ದ 3 ವರ್ಷದ ಮಗುವಿನ ಮೇಲೆ ಬಸ್​ ಚಾಲಕನಿಂದ ಅತ್ಯಾಚಾರ