Publish Date: Sun, 28 Oct 2018 (07:21 IST)
Updated Date: Sun, 28 Oct 2018 (07:24 IST)
ಲಕ್ನೋ : ನರ್ಸರಿಗೆ ಹೋಗುತ್ತಿರುವ ಮೂರು ವರ್ಷದ ಮಗುವಿನ ಮೇಲೆ ಖಾಸಗಿ ಶಾಲೆಯ ಬಸ್ ಚಾಲಕ ಅತ್ಯಾಚಾರ ಎಸಗಿರುವ ಘಟನೆ ಗ್ರೇಟರ್ ನೋಯ್ಡಾದ ಗುರುಗ್ರಾಮದಲ್ಲಿ ನಡೆದಿದೆ.
ಪ್ರತಿದಿನ ನರ್ಸರಿಗೆ ಬಸ್‌ನಲ್ಲಿ ಹೋಗುತ್ತಿದ್ದ ಮಗು ಅಕ್ಟೋಬರ್ 9ರಂದು ಬಸ್ ನಲ್ಲಿ ಮನೆಗೆ ಮರಳುತ್ತಿದ್ದಾಗ ಆಕೆಯ ಮೇಲೆ ಶಾಲೆಯ ಬಸ್ ಚಾಲಕ ಬಸ್ ನಲ್ಲೇ ಅತ್ಯಾಚಾರ ಎಸಗಿದ್ದಾನೆ.
ಮನೆಗೆ ಬಂದು ಜೋರಾಗಿ ಅಳುತ್ತಿದ್ದ ಮಗುವನ್ನು ಅಪ್ಪ ವಿಚಾರಿಸಿದಾಗ ಈ ವಿಚಾರ ಬೆಳಕಿಗೆ ಬಂದಿದೆ. ನಂತರ ಪಾಲಕರು ಶಾಲೆಗೆ ತೆರಳಿ ಚಾಲಕನ ಬಗ್ಗೆ ವಿಚಾರಿಸಿ, ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆರೋಪಿ ವಿರುದ್ಧ ಪೊಕ್ಸೊ ಮತ್ತು ಐಪಿಸಿ ಸೆಕ್ಷನ್ 376ಎ, 376ಬಿ ಅಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಾಗಿ ಹುಡುಕಾಟ ಪ್ರಾರಂಭಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.