Publish Date: Tue, 16 Oct 2018 (06:58 IST)
Updated Date: Tue, 16 Oct 2018 (07:00 IST)
ಲಕ್ನೋ : ನಾಯಿಗೆ ಹೊಡೆದ ಎಂಬ ಕ್ಷುಲಕ ಕಾರಣಕ್ಕಾಗಿ ವಿದ್ಯಾರ್ಥಿಯೊಬ್ಬನ ಮೇಲೆ ಗುಂಡು ಹಾರಿಸಿ ಜೀವವನ್ನೇ ತೆಗೆಯಲು ಯತ್ನಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಸಚಿನ್ ಕಶ್ಯಪ್ (17) ಗುಂಡಿನ ದಾಳಿಗೆ ಒಳಗಾದ ವಿದ್ಯಾರ್ಥಿಯಾಗಿದ್ದು, ಗುಂಡೇಟು ತಿಂದು ಸಾವುಬದುಕಿನ ಮಧ್ಯ ಹೋರಾಟ ಮಾಡುತ್ತಿರುವ ಈತನನ್ನು ಮೀರತ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಆತನ ಸ್ಥಿತಿ ಗಂಭೀರವಾಗಿದೆ ಎಂಬುದಾಗಿ ತಿಳಿದುಬಂದಿದೆ.
ಸಚಿನ್ ಶನಿವಾರದಂದು ಕಾಲೇಜಿನಿಂದ ಮನೆಗೆ ಬೈಕಿನಲ್ಲಿ ಬರುವಾಗ ನಾಯಿಯೊಂದು ಆತನನ್ನು ಹಿಂಬಾಲಿಸಿ ಬೊಗಳಿದಕ್ಕೆ ಆತ ಬೈಕ್ ನಿಲ್ಲಿಸಿ ನಾಯಿಗೆ ಹೊಡೆದಿದ್ದಾನೆ. ಈ ವಿಚಾರಕ್ಕೆ ಮೂವರು ಆತನ ಜೊತೆ ಜಗಳ ಮಾಡಿದ್ದಾರೆ. ನಂತರ ಜಗಳ ವಿಕೋಪಕ್ಕೆ ತಿರುಗಿ ಅದರಲ್ಲಿ ಒಬ್ಬ ಸಚಿನ್ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.