Select Your Language

Notifications

webdunia
webdunia
webdunia
webdunia

ಲೈಂಗಿಕ ಉದ್ರೇಕದ ಮಾತ್ರೆ ನೀಡಿ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಸಹೋದ್ಯೋಗಿಗಳು

webdunia
ನವದೆಹಲಿ , ಮಂಗಳವಾರ, 16 ಅಕ್ಟೋಬರ್ 2018 (06:53 IST)
ನವದೆಹಲಿ : ಸಹೋದ್ಯೋಗಿ ಯುವತಿಗೆ ಲೈಂಗಿಕ ಉದ್ರೇಕದ ಮಾತ್ರೆ ನೀಡಿ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆಯೊಂದು ವರದಿಯಾಗಿದೆ.


ಬಿರ್ಜು(25), ವಿನೋದ್​ ಕುಮಾರ್​ (31) ಈ ಕೃತ್ಯ ಎಸಗಿದ ಕಾಮುಕರು. ಇವರಿಬ್ಬರು ಹಾಗೂ ಯುವತಿ ಬಹು ಅಂತರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಶನಿವಾರ ರಾತ್ರಿ ಮನೆಗೆ ಡ್ರಾಪ್ ನೀಡುವುದಾಗಿ ಹೇಳಿ ಪಾನೀಯದಲ್ಲಿ ಲೈಂಗಿಕ ಉದ್ರೇಕದ ಮಾತ್ರೆಗಳನ್ನು  ಸೇರಿಸಿ ಯುವತಿಗೆ ಕುಡಿಸಿ ಆಕೆಯನ್ನು ಫ್ಲಾಟ್​ಗೆ ಕರೆದೊಯ್ದು, ಅತ್ಯಾಚಾರ ನಡೆಸಿದ್ದಾರೆ.


ಈ ವಿಚಾರವನ್ನು ತನ್ನ ಮನೆಯವರಿಗೆ ತಿಳಿಸಿದ ಸಂತ್ರಸ್ತ್ರ ಯುವತಿ ,ಭಾನುವಾರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ. ಯುವತಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಆಕೆ ಮೇಲೆ ಅತ್ಯಾಚಾರವಾಗಿರುವುದು ದೃಢಪಟ್ಟಿದೆ. ಘಟನೆ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಭರ್ಜರಿ ಪ್ರಚಾರ ಶುರುಮಾಡಿದ ರಾಹುಲ್ ಗಾಂಧಿ