Select Your Language

Notifications

webdunia
webdunia
webdunia
webdunia

ಪಬ್‍ಜೀ ಆನ್‍ಲೈನ್ ಗೇಮ್‍ ಚಟದಿಂದ ತನ್ನವರನ್ನೆ ಕೊಲೆ ಮಾಡಿದ 19 ವರ್ಷದ ಯುವಕ

ಪಬ್‍ಜೀ ಆನ್‍ಲೈನ್ ಗೇಮ್‍ ಚಟದಿಂದ ತನ್ನವರನ್ನೆ ಕೊಲೆ ಮಾಡಿದ 19 ವರ್ಷದ ಯುವಕ
ನವದೆಹಲಿ , ಶನಿವಾರ, 13 ಅಕ್ಟೋಬರ್ 2018 (06:38 IST)
ನವದೆಹಲಿ : ಪಬ್‍ಜೀ ಆನ್‍ಲೈನ್ ಗೇಮ್‍ ನ ಚಟಕ್ಕೆ ಬಿದ್ದು 19 ವರ್ಷದ ಯುವಕನೊಬ್ಬ ಹೆತ್ತ ತಂದೆ ತಾಯಿ ಹಾಗೂ ಒಡಹುಟ್ಟಿದ ಸೋದರಿಯನ್ನೇ ಕೊಲೆ ಮಾಡಿದ ಘಟನೆ ಮೆಹ್ರಾಲಿಯಲ್ಲಿ ನಡೆದಿದೆ.


ಸುರಾಜ್ ಅಲಿಯಾಸ್ ಸರ್ನಮ್ ವರ್ಮಾ ತನ್ನವರನ್ನೇ ಕೊಂದ ಆರೋಪಿ. ಇತ ಕಾಲೇಜಿಗೆ  ಬಂಕ್ ಮಾಡಿ ಸ್ನೇಹಿತನ ರೂಮಿನಲ್ಲಿ ಬೆಳಗ್ಗೆ 7 ರಿಂದ ಸಂಜೆ 6 ರವರೆಗೆ ಪಬ್‍ಜೀ ಆನ್‍ಲೈನ್ ಗೇಮ್‍ ಆಡಿದ್ದಾನೆ.  ಆದರೆ ಸಹಜವಾಗಿಯೇ ಮನೆಗೆ ಬಂದ ಆತ ಬೆಳಗಿನ ಜಾವ ಮಲಗಿದ್ದ ತಂದೆಗೆ ಚಾಕುವಿನಿಂದ ಇರಿದಿದ್ದಾನೆ, ನಂತರ ಪಕ್ಕದಲ್ಲೇ ಮಲಗಿದ್ದ ತಾಯಿಗೂ ಚಾಕುವಿನಿಂದ ಚುಚ್ಚಿದ್ದಾನೆ. ಆಮೇಲೆ  ಸಹೋದರಿಯ ಕೊಠಡಿಗೆ ತೆರಳಿ ಆಕೆಯ ಕತ್ತನ್ನು ಇರಿದಿದ್ದಾನೆ. ಮಗಳನ್ನು ರಕ್ಷಿಸಲು ಬಂದ ತಾಯಿಗೂ ಮತ್ತೊಮ್ಮೆ ಚಾಕು ಹಾಕಿದ್ದಾನೆ.


ಈ ಘಟನೆ ಕುರಿತು ಪೊಲೀಸರು ತನಿಖೆ ನಡೆಸಿದಾಗ ಕೃತ್ಯ ಎಸಗುವ ಮುನ್ನ ಆರೋಪಿ ಸುರಾಜ್ ಹಿರಿಯ ವಿದ್ಯಾರ್ಥಿಗಳ ಜೊತೆ ವಾಟ್ಸಪ್ ನಲ್ಲಿ ಚರ್ಚೆ ನಡೆಸಿದ್ದರಿಂದ ಆರೋಪಿ ಆತನೇ ಎಂಬುದು ತಿಳಿದುಬಂದಿದೆ. ಈ ಹಿನ್ನಲೆಯಲ್ಲಿ ಬುಧವಾರ ಸಂಜೆ ಪೊಲೀಸರು ಆರೋಪಿ ಸುರಾಜ್‍ನನ್ನು ಬಂಧಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 

Share this Story:

Follow Webdunia kannada

ಮುಂದಿನ ಸುದ್ದಿ

ಹೈ.ಕ. ಜಿಲ್ಲೆಗಳ ಅಭಿವೃದ್ಧಿ ಚರ್ಚೆಗಾಗಿ ಶೀಘ್ರವೇ ಸಭೆ