Select Your Language

Notifications

webdunia
webdunia
webdunia
webdunia

ರೂಪಾಯಿ ಮೌಲ್ಯ ಕುಸಿತ; ಸಮಸ್ಯೆ ಪರಿಹರಿಸಲು ಆರ್.ಬಿ.ಐ ಹೊಸ ಪ್ಲಾನ್

ರೂಪಾಯಿ ಮೌಲ್ಯ ಕುಸಿತ; ಸಮಸ್ಯೆ ಪರಿಹರಿಸಲು ಆರ್.ಬಿ.ಐ ಹೊಸ ಪ್ಲಾನ್
ನವದೆಹಲಿ , ಬುಧವಾರ, 10 ಅಕ್ಟೋಬರ್ 2018 (11:38 IST)
ನವದೆಹಲಿ : ಇತ್ತೀಚೆಗೆ ದಿನೇದಿನೇ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುತ್ತಿರುವ ಹಿನ್ನಲೆಯಲ್ಲಿ ಅದನ್ನು ಸಮತೋಲನ ಮಾಡಲು ಕೇಂದ್ರ ಸರ್ಕಾರ ಹೊಸದೊಂದು ಯೋಜನೆ ರೂಪಿಸಿದೆ ಎಂಬುದಾಗಿ ತಿಳಿದುಬಂದಿದೆ.


ರೂಪಾಯಿ ಮೌಲ್ಯ ಕುಸಿಯುತ್ತಿರುವುದರಿಂದ ವಿದೇಶಿ ವ್ಯಾಪಾರದಲ್ಲಿ ಸಮಸ್ಯೆ ಉದ್ಭವಿಸಬಹುದು ಎಂದು ಮನಗೊಂಡ ಕೇಂದ್ರ ಸರ್ಕಾರ ಎನ್ ಆರ್ ಐ ನೆರವು ಪಡೆಯವ ನಿರ್ಧಾರ ಮಾಡಿದೆ. ಈ ಬಗ್ಗೆ ಈಗಾಗಲೇ ಆರ್ಥಿಕ ಇಲಾಖೆ ಅಧಿಕಾರಿಗಳು ಹಾಗೂ ಸೆಂಟ್ರಲ್ ಬ್ಯಾಂಕ್ ಅಧಿಕಾರಿಗಳು ಚರ್ಚಿಸಿದ್ದಾರೆ ಎನ್ನಲಾಗಿದೆ‌.

 

ಈ ಯೋಜನೆಯ ಪ್ರಕಾರ ವಿದೇಶದಲ್ಲಿ ನೆಲೆಸಿರುವ ಭಾರತೀಯರಿಂದ ಸಹಾಯ ಪಡೆಯುವ ಬಗ್ಗೆ ಚರ್ಚೆ ನಡೆಸಿದ್ದು, ಬಾಂಡ್ ಖರೀದಿ ಹಾಗೂ ಡಾಲರ್ ಡೆಪಾಸಿಟ್ ಮಾಡುವಂತೆ ಮನವಿ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಮಾಹಿತಿ ನೀಡಲು  ಆರ್.ಬಿ.ಐ ಒಪ್ಪುತ್ತಿಲ್ಲ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 


Share this Story:

Follow Webdunia kannada

ಮುಂದಿನ ಸುದ್ದಿ

ಟಿಪ್ಪು ಜಯಂತಿ ಬಂದ್ ಮಾಡಿ ; ದಸರಾ ವೇದಿಕೆ ಮೇಲೆ ಸಿಎಂಗೆ ಪ್ರತಾಪ್ ಸಿಂಹ ಮನವಿ