Select Your Language

Notifications

webdunia
webdunia
webdunia
webdunia

10 ಟನ್ ತೂಕದ ಈ ಕಲ್ಲಿನ ಬೆಲೆ ಕೇಳಿದ್ರೆ ದಂಗಾಗ್ತೀರಾ

10 ಟನ್ ತೂಕದ ಈ ಕಲ್ಲಿನ ಬೆಲೆ ಕೇಳಿದ್ರೆ ದಂಗಾಗ್ತೀರಾ
ನವದೆಹಲಿ , ಬುಧವಾರ, 10 ಅಕ್ಟೋಬರ್ 2018 (08:39 IST)
ನವದೆಹಲಿ : ಇತ್ತೀಚೆಗೆ ದೇಶವಿದೇಶಗಳಲ್ಲಿ ಉಲ್ಕೆಯ ತುಣುಕುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಇದನ್ನು ತಮ್ಮದಾಗಿಸಿಕೊಳ್ಳಲು ಪ್ರತಿಷ್ಠಿತ ಸಂಸ್ಥೆಗಳು ಅಪಾರ ಹಣ ವ್ಯಯಮಾಡಲು  ಮುಂದಾಗಿವೆ. ಅದೇರೀತಿ ಅಮೆರಿಕಾದ ಮಿಚಿಗನ್​​ ವಿಶ್ವಾವಿದ್ಯಾಲಯವೂ ಉಲ್ಕೆಯ ತುಣುಕುಗಳನ್ನು ಸಂಗ್ರಹಿಸಲು ಮುಂದಾಗಿದೆ.

ಮಿಚಿಗನ್​​ನಲ್ಲಿ ವ್ಯಕ್ತಿಯೋರ್ವನ ಬಳಿ ಮೂವತ್ತು ವರ್ಷದ ಹಿಂದಿನ ಉಲ್ಕಾಶಿಲೆಯ ತುಣುಕು ಇದೆ ಎಂಬುದಾಗಿ ತಿಳಿದುಬಂದಿದೆ. ಈತನಿಗೆ 1988 ರಲ್ಲಿ ಮಿಚಿಗನ್​​ನಲ್ಲಿ ಮನೆಯೊಂದನ್ನು ಖರೀದಿಸಿದಾಗ ಅಂದು ಮಾಲಿಕ 10 ಟನ್ ತೂಕದ ಉಲ್ಕಾಶಿಲೆಯ ತುಣುಕು ಸಮೇತ ಮನೆ ಮಾರಾಟ ಮಾಡಿದ್ದಾನೆ. ಆದರೆ ಸಂಶೋಧನೆಯ ಪ್ರಕಾರ ಈ ಉಲ್ಕಾಶಿಲೆಯ ತುಣುಕು 1930ರಲ್ಲಿ ಆಕಾಶದಿಂದ ಧರೆಗೆ ಅಪ್ಪಳಿಸಿದ್ದ ಅಪರೂಪದ ಕಲ್ಲು ಎಂಬುದಾಗಿ ತಿಳಿದಿಬಂದಿದೆ.

 

ಇದಗ ಮಿಚಿಗನ್​​ ವಿಶ್ವಾವಿದ್ಯಾಲಯದ ಸಂಶೋಧನ ವಿಭಾಗಕ್ಕೆ ಈ ತುಣುಕು ಬೇಕಾಗಿರುವ ಕಾರಣಕ್ಕೆ ಆತನಿಂದ ಸುಮಾರು 10 ಟನ್ ತೂಕದ ಈ ಉಲ್ಕಾಶಿಲೆಯ ತುಣುಕಿಗೆ ಇದೀಗ ಬರೋಬ್ಬರಿ 74 ಲಕ್ಷ ರೂಪಾಯಿಗಳನ್ನು ಕೊಟ್ಟು ಖರೀದಿಸಲು ಮುಂದಾಗಿದೆ. ಹಾಗೇ ಉಲ್ಕೆಯ ಪೈಕಿ ಸಣ್ಣ ತುಂಡು ಸಿಕ್ಕಿದರೂ ಸಾಕು ಎಂದು ಅಂತರ್ಜಾಲದಲ್ಲಿ ಇಂತಹ ಸಣ್ಣ ತುಂಡಿಗೆ 8.3 ಲಕ್ಷ ರೂಪಾಯಿ ನೀಡುವ ಆಫರ್ ನೀಡಿದ್ದಾರೆ ಎನ್ನಲಾಗಿದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಲೈಂಗಿಕ ಬಯಕೆ ಪೂರೈಸದ ಬಾಲಕನಿಗೆ ಈ ಮಹಿಳೆ ಮಾಡಿದ್ದೇನು ಗೊತ್ತಾ?!