Select Your Language

Notifications

webdunia
webdunia
webdunia
Saturday, 12 April 2025
webdunia

ಮಾವ ಅರ್ಜುನ್ ಸರ್ಜಾ ನಂತರ ಅಳಿಯ ಚಿರಂಜೀವಿ ಸರ್ಜಾ ಕೂಡ ಮೀಟೂ ಆರೋಪಕ್ಕೆ ಗುರಿಯಾದ್ರಾ?

ಶೃತಿ ಹರಿಹರನ್
ಬೆಂಗಳೂರು , ಸೋಮವಾರ, 29 ಅಕ್ಟೋಬರ್ 2018 (06:33 IST)
ಬೆಂಗಳೂರು : ಇತ್ತೀಚೆಗೆ ನಟಿ ಶೃತಿ ಹರಿಹರನ್ ಬಹುಭಾಷಾ ನಟ ಅರ್ಜುನ್ ಸರ್ಜಾ ಮೇಲೆ ಮೀಟೂ ಆರೋಪ ಮಾಡಿ ಸ್ಯಾಂಡಲ್ ವುಡ್ ನಲ್ಲಿ ಬಾರೀ ಸಂಚಲನ ಮೂಡಿಸಿದ್ದರು. ಅದರ  ಬೆನ್ನಲೇ ಇದೀಗ  ಅರ್ಜುನ್ ಸರ್ಜಾ ಅವರ  ಅಳಿಯ ನಟ ಚಿರಂಜೀವಿ ಸರ್ಜಾ ಮೇಲೆ ಮೀಟೂ ಆರೋಪ ಕೇಳಿ ಬರುತ್ತಿದೆ.


2017 ರಲ್ಲಿ ತೆಲುಗು ಚಿತ್ರ ‘ಕ್ಷಣಂ’ ರಿಮೇಕ್ ವೇಳೆ ಈ ಘಟನೆ ನಡೆದಿದ್ದು, ಕೆ.ಎಂ.ಚೈತನ್ಯ ನಿರ್ದೇಶನದ ಹೆಸರಿಡದ ಚಿತ್ರಕ್ಕಾಗಿ ಶೃತಿ ಹರಿಹರನ್ ಮತ್ತು ಸಂಗೀತಾ ಭಟ್ ಇಬ್ಬರನ್ನು ನಾಯಕಿರನ್ನಾಗಿ ಆಯ್ಕೆ ಮಾಡಲಾಗಿತ್ತು. ಈ ವೇಳೆ ತಮಗಾದ ಅನುಭವವನ್ನು ಫೇಸ್ ಬುಕ್ ನಲ್ಲಿ ತಿಳಿಸಿದ ನಟಿ ಸಂಗೀತಾ ಅವರು , “2017ರಲ್ಲಿ ರೀಮೇಕ್ ಚಿತ್ರವೊಂದನ್ನು ಒಪ್ಪಿಕೊಂಡಿದ್ದೆ.


ಆದರೆ ಆ ಸಿನಿಮಾದ ನಟ ಕನ್ಯತ್ವವನ್ನು ಪ್ರಶ್ನೆ ಮಾಡಿದ್ದರು. ಆದ್ದರಿಂದ ನಾನು ಸಿನಿಮಾದಿಂದ ಹೊರಬಂದೆ “ ಎಂದು ಹೇಳಿದ್ದರು.
ಆದರೆ ಇದಕ್ಕೆ ಕಮೆಂಟ್ ಮಾಡಿದ ನಟಿಯ ಅಭಿಮಾನಿಗಳು,” ಆ ಸಿನಿಮಾದ ನಟ ಚಿರಂಜೀವಿ ಆಗಿದ್ದರು. ಆದ್ದರಿಂದ ಅವರು ಈ ರೀತಿ ಪ್ರಶ್ನೆ ಮಾಡಿದ್ದಾರಾ?” ಎಂಬ ಪ್ರಶ್ನೆಯನ್ನು ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸಂಗೀತಾ ಭಟ್,’’ ನಾನು ಹಾಕಿರುವ ಪೋಸ್ಟ್ ನಲ್ಲಿ ಯಾವ ನಟ, ನಿರ್ದೇಶಕ, ನಿರ್ಮಾಪಕರ ಮೇಲೂ ಮೀಟೂ ಆರೋಪ ಮಾಡಿಲ್ಲ. ನನ್ನ ಅನುಭವನ್ನು ಹಂಚಿಕೊಂಡಿದ್ದೇನೆ ಅಷ್ಟೆ. ನಾನು ಮಾಡಿರುವ ಪೋಸ್ಟ್ ಇಟ್ಟುಕೊಂಡು ಕೆಲವರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಆ ರೀತಿ ಮಾಡಬೇಡಿ. ನಮ್ಮ ಪಾಡಿಗೆ ನಮ್ಮನ್ನು ಬಿಡಿ” ಎಂದು ಮನವಿ ಮಾಡಿಕೊಂಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ವೀರಮಹಾದೇವಿ ಚಿತ್ರದಲ್ಲಿ ಸಂಸ್ಕಾರವಿಲ್ಲದ ಸನ್ನಿ ಲಿಯೋನ್ ನಟಿಸುತ್ತಿರುವುದು ಖಂಡನೀಯ- ಪ್ರಮೋದ್ ಮುತಾಲಿಕ್