ವೀರಮಹಾದೇವಿ ಚಿತ್ರದಲ್ಲಿ ಸಂಸ್ಕಾರವಿಲ್ಲದ ಸನ್ನಿ ಲಿಯೋನ್ ನಟಿಸುತ್ತಿರುವುದು ಖಂಡನೀಯ- ಪ್ರಮೋದ್ ಮುತಾಲಿಕ್

ಭಾನುವಾರ, 28 ಅಕ್ಟೋಬರ್ 2018 (10:42 IST)
ಬೆಂಗಳೂರು : ಬಾಲಿವುಡ್ ನಟಿ, ಮಾಜಿ ನೀಲಿ ಚಿತ್ರ ತಾರೆ ಸನ್ನಿಲಿಯೋನಾ 'ವೀರಮಹಾದೇವಿ' ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವುದಕ್ಕೆ ಇದೀಗ ಶ್ರೀರಾಮಸೇನೆ ಕಡೆಯಿಂದ ಬಾರೀ ವಿರೋಧ ವ್ಯಕ್ತವಾಗುತ್ತಿದೆ.


ಕನ್ನಡ ರಕ್ಷಣಾ ವೇದಿಕೆ ಯುವ ಸೇನೆಯಿಂದ ನಗರದ ಖಾಸಗಿ ಹೋಟೆಲ್ ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್,’ ವೀರಮಹಾದೇವಿ ಚಿತ್ರದಿಂದ ಸನ್ನಿ ಲಿಯೋನ್ ಕೈ ಬಿಡಬೇಕು. ಇಲ್ಲದಿದ್ದರೆ ಹೋರಾಟ ಮುಂದುವರೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.


ವೀರಮಹಾದೇವಿ ಚಿತ್ರದಲ್ಲಿ ಸಂಸ್ಕಾರವಿಲ್ಲದ ಸನ್ನಿ ಲಿಯೋನ್ ನಟಿಸುತ್ತಿರುವುದು ಖಂಡನೀಯ. ಇತಿಹಾಸಕ್ಕೆ ಕಳಂಕ ತರುವುದನ್ನು ನಾವು ಒಪ್ಪುವುದಿಲ್ಲ. ಹೀಗಾಗಿ ಈ ಚಿತ್ರದಲ್ಲಿ ನೀಲಿ ತಾರೆ ಸನ್ನಿ ಲಿಯೋನ್ ನಟಿಸಬಾರದು ಎಂದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಸ್ಪೋರ್ಟ್ಸ್​ ಕೋಟಾದಿಂದ ಬಂದ ಕ್ರಿಕೆಟರ್ ರಕ್ಷಿತಾ ರೈ ಬಿಗ್​ಬಾಸ್ ಮನೆಯಿಂದ ಔಟ್