ಟ್ರೋಲ್ ಗೆ ಒಳಗಾದ ನಟಿ ದೀಪಿಕಾ –ರಣವೀರ್ ಲಗ್ನ ಪತ್ರಿಕೆ

ಬುಧವಾರ, 24 ಅಕ್ಟೋಬರ್ 2018 (09:56 IST)
ಮುಂಬೈ : ಬಾಲಿವುಡ್ ನ ತಾರಾ ಜೋಡಿ  ದೀಪಿಕಾ ಹಾಗೂ ರಣವೀರ್ ಅವರ ಲಗ್ನ ಪತ್ರಿಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಗೆ ಒಳಗಾಗಿದೆ.


ಹೌದು. ಇತ್ತೀಚೆಗೆ ನಟಿ ದೀಪಿಕಾ ಹಾಗೂ ರಣವೀರ್ ತಾವು ನವೆಂಬರ್ 14 ಹಾಗೂ 15ರಂದು ಮದುವೆಯಾಗುತ್ತಿರುವುದಾಗಿ ಇಂಗ್ಲೀಷ್ ಹಾಗೂ ಹಿಂದಿ ಎರಡೂ ಭಾಷೆಯಲ್ಲಿರುವ ಲಗ್ನ ಪತ್ರಿಕೆ ಸಮೇತ ಟ್ವೀಟರ್ ನಲ್ಲಿ ಪೋಸ್ಟ್ ಮಾಡಿದ್ದರು. ಆದರೆ ಹಿಂದಿ ಲಗ್ನ ಪತ್ರಿಕೆಯಲ್ಲಿರುವ ತಪ್ಪುಗಳು ಈಗ ಟ್ರೋಲರ್ ಬಾಯಿಗೆ ಆಹಾರವಾಗಿದೆ.


ಲಗ್ನ ಪತ್ರಿಕೆಯಲ್ಲಿ ದೀಪಿಕಾ ಹೆಸರು ಹಾಗೂ ಕಿ ಅಕ್ಷರ ತಪ್ಪಾಗಿದೆ. ಜೊತೆಗೆ ಮದುವೆ ದಿನಾಂಕವನ್ನು 14, 15 ಎಂದು ಬರೆಯಲಾಗಿದೆ. ಮದುವೆಯನ್ನು ಎರಡು ದಿನ ಮಾಡಿಕೊಳ್ತೀರಾ? ಒಂದು ದಿನ ರಣವೀರ್ ಮದುವೆ, ಇನ್ನೊಂದು ದಿನ ದೀಪಿಕಾ ಮದುವೆಯಾ? ಎಂದು ಟ್ರೋಲರ್ ಪ್ರಶ್ನೆ ಮಾಡಿದ್ದಾರೆ.


ಅಲ್ಲದೇ ಕೆಲವು ಅಭಿಮಾನಿಗಳು ಕನ್ನಡದಲ್ಲಿ ಲಗ್ನ ಪತ್ರಿಕೆಯಿಲ್ಲವೆಂದರೆ , ಇನ್ನೂ ಕೆಲವರು ಮದುವೆ ಎಲ್ಲಿ ನಡೆಯುತ್ತಿದೆ ಎಂದು ತಿಳಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಶೃತಿ ಹರಿಹರನ್ ಬೆಂಬಲಿಸಿದ ನಟ ಚೇತನ್ ಗೆ ದೂರವಾಣಿಯಲ್ಲೇ ಬೆವರಿಳಿಸಿದ ಧ್ರುವ ಸರ್ಜಾರಿಂದ ಈಗ ಮತ್ತೊಂದು ನಿರ್ಧಾರ!