ಬೆದರಿಕೆಯೊಡ್ಡಿ ವಿವಾಹಿತ ಮಾಜಿ ಪ್ರೇಯಸಿಯ ಮೇಲೆ ಅತ್ಯಾಚಾರ ಎಸಗಿದ ಬ್ಯಾಂಕ್ ಉದ್ಯೋಗಿ

ಸೋಮವಾರ, 22 ಅಕ್ಟೋಬರ್ 2018 (07:06 IST)
ಮುಂಬೈ : ಮಾಜಿ ಪ್ರೇಯಸಿಯ ಬೆತ್ತಲೆ ಫೋಟೊ ತೆಗೆದು ಆ ಮೂಲಕ ಬೆದರಿಕೆಯೊಡ್ಡಿ ಆಕೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಬ್ಯಾಂಕ್ ಉದ್ಯೋಗಿಯೊಬ್ಬನನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ.


ಲೋವರ್ ಪರೇಲ್ ನಿವಾಸಿ ವಿಲಾಸ್ ಕೃಷ್ಣ ಕದಂ (38) ಬಂಧಿತ ಆರೋಪಿ, ಈತ ಹಾಗೂ ಸಂತ್ರಸ್ತ ಮಹಿಳೆ ಇಬ್ಬರು ಒಂದೇ ಬ್ಯಾಂಕ್‍ನಲ್ಲಿ ಕೆಲಸ ಮಾಡುತ್ತಿದ್ದು, ಒಬ್ಬರನೊಬ್ಬರು ಪ್ರೀತಿಸುತ್ತಿದ್ದರು. ಅಲ್ಲದೇ, ಇಬ್ಬರ ನಡುವೆ ದೈಹಿಕ ಸಂಪರ್ಕ ಕೂಡ ಇತ್ತು. ಆದರೆ ಮಹಿಳೆಗೆ ಬೇರೊಬ್ಬ ಯುವಕನ ಜೊತೆ ಮದುವೆ ನಿಶ್ಚಯವಾದಾಗ ಅದನ್ನು ನಿಲ್ಲಿಸುವಂತೆ ಮಹಿಳೆ ವಿಲಾಸ್ ಬಳಿ ಕೇಳಿಕೊಂಡರು ಒಪ್ಪದ ಆತ ಕೊನೆಯದಾಗಿ ನಿನ್ನ ಜೊತೆಗೆ ಮಾತನಾಡಬೇಕು ಎಂದು ಕರೆದು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.


ಅಷ್ಟೇ ಅಲ್ಲದೇ  ಮದುವೆಯ ನಂತರವೂ ಫೋನ್ ಮಾಡಿ, ಕಿರುಕುಳ ನೀಡುತ್ತಿದ್ದ. ಒಪ್ಪದಿದ್ದಕ್ಕೆ ಆಕೆಯ ಪತಿಗೆ ತಮ್ಮ ಅಕ್ರಮ ಸಂಬಂಧದ ವಿಚಾರ ಹಾಗೂ ನಿನ್ನ ಬೆತ್ತಲೆ ಚಿತ್ರಗಳನ್ನು ಕಳುಹಿಸುತ್ತೇನೆ ಎಂದು ಮಾನಸಿಕ ಹಿಂಸೆ ನೀಡುತ್ತಿದ್ದ. ಇದರಿಂದ ಆತನಿಂದ ಅನೇಕ ಬಾರಿ ಅತ್ಯಾಚಾರಕ್ಕೆ ಆಕೆ ಒಳಗಾಗಬೇಕಾಯಿತು.


ನಂತರ  ಈ ಬಗ್ಗೆ ಸಂತ್ರಸ್ತ ಮಹಿಳೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಇದೀಗ ವಿಲಾಸ್ ಮೇಲೆ ಅತ್ಯಾಚಾರ, ಹಲ್ಲೆ, ಬೆದರಿಕೆ ಆರೋಪದಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆತನನ್ನು ಬಂಧಿಸಿ ಸಂತ್ರಸ್ತ ಮಹಿಳೆಯ ನಗ್ನ ಫೋಟೋಗಳಿದ್ದ ಮೊಬೈಲ್ ಅನ್ನು ವಶಕ್ಕೆ ಪಡೆದಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ 9ನೇ ತರಗತಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಕಾಮುಕರು