Publish Date: Sat, 20 Oct 2018 (08:42 IST)
Updated Date: Sat, 20 Oct 2018 (08:44 IST)
ಮೀರತ್ : ಒಡಹುಟ್ಟಿದ ತಂಗಿಯ ಮೇಲೆ ಸಹೋದರರು ನಿರಂತರ 5 ವರ್ಷಗಳಿಂದ ಸಾಮೂಹಿಕವಾಗಿ ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಮೀರತ್ ನಲ್ಲಿ ನಡೆದಿದೆ.
15 ವರ್ಷದ ಸಂತ್ರಸ್ತೆಯ ಮೇಲೆ ಆಕೆಯ ಸಹೋದರರು ತಾಯಿಯನ್ನು ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿ ಕಳೆದ ಐದು ವರ್ಷದಿಂದ ಸತತವಾಗಿ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ. ತಾಯಿಯನ್ನು ಕೊಲೆ ಮಾಡುತ್ತಾರೆಂದು ಹೆದರಿ ಈವರೆಗೂ ಸಂತ್ರಸ್ತೆ ದೂರು ದಾಖಲಿಸಲಿಲ್ಲ.
ಆದರೆ ಸಹೋದರರ ಕಿರುಕುಳ ಹೆಚ್ಚಾಗುತ್ತಿದ್ದರಿಂದ ಈ ಬಗ್ಗೆ ಬುಧವಾರ ಸಂತ್ರಸ್ತೆ ದೂರು ದಾಖಲಿಸಿದ್ದಾಳೆ. ದೂರು ದಾಖಲಾಗುತ್ತಿದ್ದಂತೆ ಆರೋಪಿಗಳು ತಲೆ ಮೆರೆಸಿಕೊಂಡಿದ್ದು, ಅವರಿಗಾಗಿ ಶೋಧಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.