Publish Date: Sat, 20 Oct 2018 (07:22 IST)
Updated Date: Sat, 20 Oct 2018 (07:25 IST)
ಪಾಟ್ನಾ : 9 ನೇ ತರಗತಿಯ ವಿದ್ಯಾರ್ಥಿನಿಗೆ ಮಧ್ಯಪಾನ ಮಾಡಿಸಿ ಆಕೆಯ ಮೇಲೆ ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಬಿಹಾರದ ಲಕ್ಕಿಸರಿ ಜಿಲ್ಲೆಯಲ್ಲಿ ನಡೆದಿದೆ.
ದುರ್ಗಾ ನವಮಿ ನೋಡಲು ತನ್ನ ಗೆಳತಿ ಜೊತೆ ತೆರಳಿದ್ದ ವಿದ್ಯಾರ್ಥಿನಿಯನ್ನು ಮೂರು ಅಂತಸ್ತಿನ ಬಿಲ್ಡಿಂಗ್ ವೊಂದರಲ್ಲಿ ಆಕೆಗೆ ಮಧ್ಯಪಾನ ಮಾಡಿಸಿ ಅತ್ಯಾಚಾರ ಎಸಗಿದ್ದಾರೆ. ನಂತರ ಆಕೆ ಕೆಳಗೆ ಇಳಿಯುವಾಗ ಕಾಲು ಜಾರಿ ಹೈವೊಲ್ಟೇಜ್ ವೈಯರ್ ಮೇಲೆ ಬಿದ್ದಿದ್ದಾಳೆ. ಇದರಿಂದ ಗಂಭೀರವಾಗಿ ಗಾಯಗೊಂಡ ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ಆಕೆ ಬಿಲ್ಡಿಂಗ್ವೊಂದರ ಮೂರನೇ ಅಂತಸ್ತು ಹೇಗೆ ತಲುಪಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿಲ್ಲ.
ಹಾಗೇ ಪೊಲೀಸರಿಗೆ ಆಕೆಯಿಂದ ಯಾವುದೇ ರೀತಿಯ ಮಾಹಿತಿ ಇಲ್ಲಿಯವರೆಗೆ ಲಭ್ಯವಾಗಿಲ್ಲ. ಬಿಲ್ಡಿಂಗ್ನಲ್ಲಿ ವಿದ್ಯಾರ್ಥಿನಿ ಬಟ್ಟೆ, ಅಲ್ಕೋಹಾಲ್ ಬಾಟಲಿ ಹಾಗೂ ಗ್ಲಾಸ್ಗಳನ್ನ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂಬುದಾಗಿ ತಿಳಿದು ಬಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.