Publish Date: Thu, 18 Oct 2018 (06:39 IST)
Updated Date: Thu, 18 Oct 2018 (06:41 IST)
ಪುಣೆ : ಬಾಯಿ ಬಾರದ 30 ವರ್ಷದ ಮಹಿಳೆಯೊಬ್ಬಳ ಮೇಲೆ ದೇಶ ಕಾಯುವ ನಾಲ್ವರು ಯೋಧರು ನಾಲ್ಕು ವರ್ಷಗಳಿಂದ ನಿರಂತರ ಅತ್ಯಾಚಾರ ಎಸಗುತ್ತಿದ್ದ ಘಟನೆ ಬೆಳಕಿಗೆ ಬಂದಿದೆ.
ವಾಕ್ ಮತ್ತು ಶ್ರವಣ ದೊಷವಿರುವ ಮಹಿಳೆ ಖಡ್ಮಿಯ ಮಿಲಿಟರಿ ಆಸ್ಪತ್ರೆಯಲ್ಲಿ ಗ್ರೇಡ್ 4 ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದರು. ಆಕೆಯ ಈ ಸಮಸ್ಯೆ ಇರುವುದನ್ನು ತಿಳಿದ ನಾಲ್ಕು ಜನ ಯೋಧರು ಆಕೆಯ ಮೇಲೆ ನಾಲ್ಕು ವರ್ಷಗಳಿಂದ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗುತ್ತಲೇ ಬಂದಿದ್ದಾರೆ.
ಜುಲೈ 2018 ರಲ್ಲಿ ವಾಕ್ ಮತ್ತು ಶ್ರವಣ ದೊಷ ಎದುರಿಸುತ್ತಿರುವವ ಕಲ್ಯಾಣಕ್ಕಾಗಿ ಇರುವ ಇಂದೋರ್ ಮೂಲದ ಸ್ವಯಂ ಸೇವಾ ಸಂಸ್ಥೆಯೊಂದನ್ನು ಸಂಪರ್ಕಿಸಿದ್ದ ಸಂತ್ರಸ್ತೆ ಕೈ ಸನ್ನೆಯ ಮೂಲಕ ಭಾಷಾ ತಜ್ಞರಿಗೆ ಎಲ್ಲವನ್ನು ವಿವರಿಸಿದ್ದಳು. ಆಕೆಯ ಸನ್ನೆಯನ್ನು ಅರ್ಥಮಾಡಿಕೊಂಡ ಅವರು ಪುಣೆಗೆ ಬಂದ ಪುರೋಹಿತ್ ಸೇನಾಧಿಕಾರಿ ಬಳಿ ದೂರು ದಾಖಲಿಸಿದ್ದಾರೆ. ಇದೀಗ ಪುಣೆ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.