Publish Date: Thu, 18 Oct 2018 (07:08 IST)
Updated Date: Thu, 18 Oct 2018 (07:11 IST)
ಒಡಿಶಾ : ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ತಂದೆ ಹಾಗೂ ಮಗ ಸೇರಿ ಮೂರು ತಿಂಗಳು ಕಾಲ ಅತ್ಯಾಚಾರ ಎಸಗಿರುವ ಘಟನೆ ಒಡಿಶಾದ ಝಾರ್ಸಗುಡಾದಲ್ಲಿ ನಡೆದಿದ್ದು , ಇದೀಗ ಬೆಳಕಿಗೆ ಬಂದಿದೆ.
ಆರೋಪಿಗಳು ತಮ್ಮ ಮನೆಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಬಾಲಕಿಯನ್ನು ಆಂಗ್ಲ್ ಜಿಲ್ಲೆಯ ತಲ್ಚರ್ನನಲ್ಲಿ ಒಂದು ರೂಮಿನಲ್ಲಿ ಬಂಧಿಸಿ ಸತತ ಮೂರು ತಿಂಗಳಗಳ ಕಾಲ ಮಗನ ಜೊತೆಗೆ ತಂದೆಯೂ ಸೇರಿಕೊಂಡು ಅತ್ಯಾಚಾರ ಎಸಗಿದ್ದಾರೆ.
ಕಾಮುಕರ ಕೈಯಿಂದ ತಪ್ಪಿಸಿಕೊಂಡು ಬಂದ ಸಂತ್ರಸ್ತೆ ಝಾರ್ಸಗುಡ ಟೌನ್ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾಳೆ. ಆದರೆ ಸಂತ್ರಸ್ತೆ ಘಟನೆಯಿಂದ ಆಘಾತಕ್ಕೊಳಗಾಗಿ ಭಯದಿಂದ ಸರಿಯಾಗಿ ಮಾತನಾಡಲು ಸಾಧ್ಯವಾಗುತ್ತಿಲ್ಲವಾದ್ದರಿಂದ ಆರೋಪಿಗಳು ಇನ್ನು ಗುರುತಿಸಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಹಾಗೇ ಈ ಪ್ರಕರಣದ ಬಗ್ಗೆ ತನಿಖೆ ಮುಂದುವರಿಸಿದ ಪೊಲೀಸರು ಸಂತ್ರಸ್ತೆ ಆರೋಪಿಗಳ ಗುರುತನ್ನು ಗುರುತಿಸಿದ ಬಳಿಕ ನಾವು ಅವರನ್ನು ಶೀಘ್ರದಲ್ಲೇ ಬಂಧಿಸುತ್ತೇವೆ ಎಂಬುದಾಗಿ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.