Select Your Language

Notifications

webdunia
webdunia
webdunia
webdunia

ನಿಮಗೆ ಲೈಂಗಿಕ ಕ್ರಿಯೆ ವೇಳೆ ನಿಮಿರು ಸಮಸ್ಯೆ ಉಂಟಾಗಲು ಮುಖ್ಯವಾಗಿ ಇವುಗಳೇ ಕಾರಣ

ನಿಮಗೆ ಲೈಂಗಿಕ ಕ್ರಿಯೆ ವೇಳೆ ನಿಮಿರು ಸಮಸ್ಯೆ ಉಂಟಾಗಲು ಮುಖ್ಯವಾಗಿ ಇವುಗಳೇ ಕಾರಣ
ಬೆಂಗಳೂರು , ಬುಧವಾರ, 17 ಅಕ್ಟೋಬರ್ 2018 (13:56 IST)
ಬೆಂಗಳೂರು : ಲೈಂಗಿಕ ಕ್ರಿಯೆ ವೇಳೆ ಪುರುಷರಲ್ಲಿ ಹೆಚ್ಚಾಗಿ ಕಂಡುಬರುವ ಸಮಸ್ಯೆ ಎಂದರೆ ಅದು ನಿಮಿರುವಿಕೆ. ಒಮ್ಮೆ ಪುರುಷರಲ್ಲಿ ನಿಮಿರು ದೌರ್ಬಲ್ಯ ಸಮಸ್ಯೆ ಉಂಟಾದರೆ ಕ್ರಮವಾಗಿಯೂ, ಸಮಸ್ಯೆ ಉಂಟಾಗಬಹುದು. ನಿಮ್ಮ ಜೀವನದ ಬಗ್ಗೆ ಎಂತಹ ಭಾವನೆಗಳನ್ನು ಹೊಂದಿದ್ದೀರಿ ಮತ್ತು ನಿಮ್ಮ ಸಂಗಾತಿಯ ಜೊತೆಗೆ ಸಂಬಂಧ ಹೇಗಿದೆ ಎಂಬುದನ್ನು ಆಧರಿಸಿಯೂ ಲೈಂಗಿಕ ದುರ್ಬಲತೆ ಉಂಟಾಗ ಬಹುದು.


ಈ ನಿಮಿರು ಸಮಸ್ಯೆ ಉಂಟಾಗಲು ಮುಖ್ಯವಾದ ಕಾರಣಗಳು ಇವು,

* ಒತ್ತಡ ಮತ್ತು ಆತಂಕದಿಂದಾಗಿ ಸಾಮಾನ್ಯವಾಗಿ ಅಥವಾ ಲೈಂಗಿಕ ಕ್ರಿಯೆಯ ಸಂದರ್ಭದಲ್ಲಿ ನಿಮಿರು ದೌರ್ಬಲ್ಯ ಉಂಟಾಗ ಬಹುದು, ಒಮ್ಮೆ ಪುರುಷನಲ್ಲಿ ನಿಗುರುವಿಕೆ ಸಮಸ್ಯೆ ಕಾಣಿಸಿ ಕೊಂಡರೆ, ಆತನು ಸೆಕ್ಸ್ ನ್ನು ಹೊಂದಲು ನರ್ವಸ್ ಭಾವನೆಯನ್ನು ಹೊಂದಿರುತ್ತಾನೆ, ನಿಮಿರುವಿಕೆಯ ಬಗ್ಗೆಯೇ ಹೆಚ್ಚಾಗಿ ಚಿಂತಿಸುತ್ತಿದ್ದರೆ ತೊಂದರೆ ಹೆಚ್ಚಾಗುತ್ತದೆ.


* ಖಿನ್ನತೆಯಿಂದ ತೊಂದರೆ ಪಡುತ್ತಿರುವ ಪುರುಷರಲ್ಲಿ ಶೇಖಡ 90ರಷ್ಟು ನಿಮಿರು ದೌರ್ಬಲ್ಯ ಉಂಟಾಗುತ್ತದೆ, ಕೆಲವೊಮ್ಮೆ ಲೈಂಗಿಕ ಬೇಸರದಿಂದಲೂ ನಿಮಿರು ದೌರ್ಬಲ್ಯ ಕಾಣಿಸಿಕೊಳ್ಳ ಬಹುದು.

* ಮಧ್ಯಪಾನ ವ್ಯಸನ, ಆಯಾಸ, ರಕ್ತನಾಳಗಳು ಗಡಸಾಗುವುಕೆ, ಡಯಾಬಿಟಿಸ್, ಮೆದಳು ಅಥವಾ ಬೆನ್ನು ಹುರಿಗೆ ಆಗಿರುವ ಹಾನಿ, ಹೈಪೋಗೊನಾಡಿಸಮ್, ಲಿವರ್ ಅಥವಾ ಕಿಡ್ನಿ ಫೇಲ್ಯೂರ್, ಲಕ್ವ ಅಥವಾ ಸ್ಟ್ರೋಕ್, ಹೈ ಕೊಲೆಸ್ಟ್ರಾಲ್, ಕೆಲವು ಔಷದಿಗಳಿಂದಾದ ಅಡ್ಡ ಪರಿಣಾಮ ಮುಂತಾದವು ನಿಮಿರು ಸಮಸ್ಯೆ ಉಂಟಾಗಲು ಶಾರೀರಿಕ ಕಾರಣಗಳು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 

Share this Story:

Follow Webdunia kannada

ಮುಂದಿನ ಸುದ್ದಿ

ಪರ್ಫ್ಯೂಮ್ ವಾಸನೆಯಿಂದ ಲೈಂಗಿಕ ಕಾಮನೆ ಉಂಟಾಗುವುದು ನಿಜವೇ?