Publish Date: Wed, 17 Oct 2018 (13:03 IST)
Updated Date: Wed, 17 Oct 2018 (13:09 IST)
ಬೆಂಗಳೂರು : ಇತ್ತೀಚೆಗೆ ಸಿನಿಮಾ ತಾರೆಯರು ಕೂಡ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದು, ಇದೀಗ ಸ್ಯಾಂಡಲ್ ವುಡ್ ನಟಿ ಪ್ರಣೀತಾ ಕೂಡ ಶಾಲೆಯೊಂದನ್ನು ದತ್ತು ಪಡೆದು ಸಾಮಾಜಿಕ ಕಳಕಳಿ ಮರೆದಿದ್ದಾರೆ.
ಹೌದು. ಬೆಂಗಳೂರಿನಲ್ಲಿ ವಾಸವಿರುವ ನಟಿ ಪ್ರಣೀತಾ ಅವರ ಹುಟ್ಟೂರು ಹಾಸನ ಸಮೀಪದ ಆಲೂರು. ಇದೀಗ ಅವರು ಹುಟ್ಟೂರಿನ ಮೇಲಿನ ಪ್ರೀತಿಯಿಂದ ಅಲ್ಲಿನ ಶಾಲೆಯೊಂದನ್ನು ದತ್ತು ಪಡೆದಿದ್ದಾರೆ.
ಅಲ್ಲದೇ ಆ ಶಾಲೆಯಲ್ಲಿ ಮೂಲ ಸೌಕರ್ಯಗಳನ್ನು ಒದಗಿಸಲು 5 ಲಕ್ಷ ಕೂಡ ನೀಡಿದ್ದಾರೆ. ದತ್ತು ಪಡೆದ ಶಾಲೆಗೆ ಆಗಾಗ ಭೇಟಿ ನೀಡುವುದರ ಮೂಲಕ ತನ್ನ ಹುಟ್ಟೂರಿಗೂ ಹೋಗುವ ಅವಕಾಶ ಸಿಕ್ಕಂತಾಗಿದೆ ಈ ನಟಿಗೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.