Select Your Language

Notifications

webdunia
webdunia
webdunia
webdunia

ಗೋರಿ ಮೇಲೆ ಲಗೋರಿ’ ಸಿನಿಮಾ ನಿರ್ದೇಶಕರಿಂದ ಯುವ ನಟಿಗೆ ಲೈಂಗಿಕ ಕಿರುಕುಳ

ಗೋರಿ ಮೇಲೆ ಲಗೋರಿ’ ಸಿನಿಮಾ ನಿರ್ದೇಶಕರಿಂದ ಯುವ ನಟಿಗೆ ಲೈಂಗಿಕ ಕಿರುಕುಳ
ಬೆಂಗಳೂರು , ಬುಧವಾರ, 17 ಅಕ್ಟೋಬರ್ 2018 (13:00 IST)
ಬೆಂಗಳೂರು : ಮೀಟೂ ಅಭಿಯಾನದ ನಂತರ ಅನೇಕ ಲೈಂಗಿಕ ಕಿರುಕುಳದ ಆರೋಪಗಳು ಕೇಳಿಬರುತ್ತಿದ್ದು, ಇದೀಗ ಸ್ಯಾಂಡಲ್‍ವುಡ್ ಯುವ ನಟಿಯೊಬ್ಬರು ನಿರ್ದೇಶಕರೊಬ್ಬರ ಮೇಲೆ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ.


ಯುವ ನಟಿಯೊಬ್ಬರು  ‘ಗೋರಿ ಮೇಲೆ ಲಗೋರಿ’ ಎಂಬ ಸಿನಿಮಾ ನಿರ್ದೇಶಕ ಎಸ್‍ಪಿ ಪ್ರಕಾಶ್ ಸಿನಿಮಾದಲ್ಲಿ ಅವಕಾಶ ನೀಡುವುದಾಗಿ ತಿಳಿಸಿ ತನ್ನ ಜೊತೆ ಕಮಿಟ್ ಆಗುತ್ತಿಯಾ, ಹಣ ಕೊಡುತ್ತೇನೆ ಎಂದು ಹೇಳಿರುವುದಾಗಿ ಆರೋಪ ಮಾಡಿದ್ದಾರೆ.


ಅಷ್ಟೇ ಅಲ್ಲದೇ ಈ ಕುರಿತು ಫೀಲಂ ಚೇಂಬರ್‍ಗೆ ದೂರು ನೀಡುವುದಾಗಿ ಹೇಳಿದಕ್ಕೆ ನನಗೆ ಪೋಲೀಸ್, ರಾಜಕೀಯ ನಾಯಕರು ಹಾಗೂ ರೌಡಿಗಳು ಗೊತ್ತು. ನೀನು ದೂರು ನೀಡಿದರೆ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ನಿರ್ದೇಶಕರು ಬೆದರಿಕೆ ಹಾಕಿದ್ದರು ಎಂದು ಹೇಳಿದ ನಟಿ ಅದಕ್ಕೆ ಸಂಬಂಧಪಟ್ಟ ವಾಟ್ಸಾಪ್ ಮೇಸೆಜ್‍ಗಳ ಸ್ಕ್ರಿನ್ ಶಾಟ್ ಫೋಟೋ ಶೇರ್ ಮಾಡಿದ್ದಾರೆ. ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 

Share this Story:

Follow Webdunia kannada

ಮುಂದಿನ ಸುದ್ದಿ

ಹಸೆಮಣೆ ಏರಲು ರೆಡಿಯಾದ ನಟಿ ನೇಹಾ ಪಾಟೀಲ್