Publish Date: Wed, 17 Oct 2018 (11:18 IST)
Updated Date: Wed, 17 Oct 2018 (11:20 IST)
ಮುಂಬೈ : ಈಗಾಗಲೇ ಮೂವರಿಂದ ಲೈಂಗಿಕ ಕಿರುಕುಳದ ಆರೋಪ ಹೊತ್ತ ಹಿಂದಿ ಸಿನಿಮಾ ನಿರ್ದೇಶಕ ಸಾಜಿದ್ ಖಾನ್ ಮೇಲೆ ಇದೀಗ ಮತ್ತೊಂದು ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದೆ.
ಹೌದು. ಈ ಹಿಂದೆ ನಿರ್ದೇಶಕ ಸಾಜಿದ್ ಖಾನ್ ಮೇಲೆ ಸಲೊನಿ ಚೋಪ್ರಾ, ರಾಚೆಲ್ ವೈಟ್ ಮತ್ತು ಪತ್ರಕರ್ತೆ ಕರಿಷ್ಮಾ ಉಪಾಧ್ಯಾಯ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಆದರೆ ಇದೀಗ ಮತ್ತೊಬ್ಬ ನಟಿ ಸಿಮ್ರಾನ್ ಸೂರಿ ನಿರ್ದೇಶಕ ಸಾಜಿದ್ ಖಾನ್ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ್ದಾರೆ.
2012ರಲ್ಲಿ “ಹಿಮ್ಮತ್‍ವಾಲಾ” ಸಿನಿಮಾ ಸಂದರ್ಭದಲ್ಲಿ ನನಗೆ ಆಡಿಷನ್‍ಗೆ ಬರುವಂತೆ ಅವರು ಕರೆ ಮಾಡಿದ್ದರು. ಅದರಂತೆ ನಾನು ಅವರ ಮನೆಗೆ ಹೋಗಿದ್ದಾಗ ಅವರು ತೆರೆದ ಮೈಯಲ್ಲಿ ಟ್ರೆಡ್‍ಮಿಲ್‍ನಲ್ಲಿದ್ದರು. ಅವರ ದೇಹವನ್ನೇ ಹೊಗಳಿಕೊಂಡ ಅವರು ಮುಜುಗರವಾಗುವಂತೆ ಮಾತನಾಡಿದ್ದರು. ಅಲ್ಲದೇ, ನನ್ನ ದೇಹವನ್ನು ತೋರಿಸುವಂತೆ ಹೇಳಿದ್ದ ಸಾಜಿದ್, ನನ್ನ ಟಾಪ್ ಕೆಳಗೆ ಎಳೆದಿದ್ದರು. ಆಗ ನಾನು ಕಿರುಚಿ, ಅವರಿಗೆ ಬೈದು ಅಲ್ಲಿಂದ ಬಂದುಬಿಟ್ಟೆ ಎಂದು ಸಿಮ್ರಾನ್ ತಮಗಾದ ಅನುಭವವನ್ನು ಹೇಳಿಕೊಂಡಿದ್ದಾರೆ.
ಹಾಗೆ ಸಾಜಿದ್‍ರಿಂದ ಸಿಮ್ರಾನ್ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದು 6 ವರ್ಷಗಳ ಹಿಂದಾದರೂ ಅವರಿಗೆ ಆ ಬಗ್ಗೆ ಹೇಳಿಕೊಳ್ಳಲು ಧೈರ್ಯ ಸಾಲಲಿಲ್ಲವಂತೆ. ಆದರೆ ಈಗಾಗಲೇ ಮೂವರು ಆರೋಪ ಹೊರಿಸಿದ ಮೇಲೆ ಅವರಿಗೆ ತಮ್ಮ ನೋವನ್ನು ಬಹಿರಂಗಪಡಿಸಲು ಧೈರ್ಯ ಬಂದಿದೆ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.